ಪುತ್ರ ಜೆಡಿಎಸ್ ಟಿಕೆಟ್ ಆಕಾಂಕ್ಷಿಯೇ ಎಂದಿದ್ದಕ್ಕೆ ರೇವಣ್ಣ ಪ್ರತಿಕ್ರಿಯೆಯೇನು ಗೊತ್ತಾ?
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಾ?ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ,ಕಳೆದ ಬಾರಿ ಭವಾನಿ ರೇವಣ್ಣ ಅವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಟಿಕೆಟ್ ಸಿಕ್ತಾ?.
ನಾನೇ ಟಿಕೆಟ್ ಗಾಗಿ ದೇವೇಗೌಡರಿಗೆ ಮತ್ತು ಎಚ್.ಡಿ.ಕುಮಾರಸ್ವಾಮಿಗೆ ಅರ್ಜಿ ಹಾಕಿದ್ದೇನೆ. ಪ್ರಜ್ವಲ್ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದಾರೆ. ಅಲ್ಲದೆ ದೇವೇಗೌಡರು ಯಾವಾಗ ಯಾರಿಗೆ ಬಾಂಬ್ ಹಾಕುತ್ತಾರೆ ಎಂಬುದು ಯಾರಿಗೂ ತಿಳಿಯಲ್ಲ ಎಂದಿದ್ದಾರೆ.
Comments