ಬಿಬಿಎಂಪಿ ಮೇಯರ್ ಪಟ್ಟಕ್ಕೆ ಜೆಡಿಎಸ್ ಬೇಡಿಕೆ, ಕಾಂಗ್ರೆಸ್ ಜೊತೆಗಿನ ಮೈತ್ರಿ ಏನಾಗಬಹುದು?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗ ಉಂಟಾಗುವ ನಿರೀಕ್ಷೆಯಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಂಗ ಉಂಟಾಗುವ ನಿರೀಕ್ಷೆಯಿದೆ. ಜೆಡಿಎಸ್ ಮೇಯರ್ ಹುದ್ದೆಗೆ ಬೇಡಿಕೆ ಇಟ್ಟಿದ್ದು,ಕಾಂಗ್ರೆಸ್ ಮೇಯರ್ ಪಟ್ಟ ಕೇಳುವಷ್ಟು ಸದಸ್ಯರನ್ನು ಪಕ್ಷ ಹೊಂದಿಲ್ಲವೆಂದು ಪ್ರತ್ಯುತ್ತರ ನೀಡಿದೆ. 'ಬಿಬಿಎಂಪಿಯಲ್ಲಿ ಮುಂದಿನ ಅವಧಿಗೆ ಕಾಂಗ್ರೆಸ್ ಜೊತೆ ಮೈತ್ರಿ ಅಗತ್ಯವೇನಿದೆ?'ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದರು. ಈಗ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, 'ಈ ವರ್ಷ ಮೇಯರ್ ಪಟ್ಟ ನೀಡಿದರೆ ಮಾತ್ರ ಮೈತ್ರಿ ಮುಂದುವರೆಯಲಿದೆಯೆಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ
Comments