ಜೆಡಿಎಸ್'ನಿಂದ ರಾಜ್ಯ ಪದಾಧಿಕಾರಿಗಳ ಪರಿಷ್ಕ್ರೃತ ಪಟ್ಟಿ ಬಿಡುಗಡೆ

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಜಾತ್ಯಾತೀತ ಜನತಾದಳ ರಾಜ್ಯ ಪದಾಧಿಕಾರಿಗಳ ಪರಿಷ್ಕ್ರೃತ ಪಟ್ಟಿ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಅಧ್ಯಕ್ಷರ ಕಾರ್ಯ ನಿರ್ವಹಣಾ ತಂಡಕ್ಕೆ ಆಲ್ಕೋಡು ಹನುಮಂತಪ್ಪ, ರಮೇಶ್ ಬಾಬು, ಅಮರನಾಥ್, ವೈ.ಎಸ್.ವಿ. ದತ್ತಾ ಹಾಗೂ ಹೆಚ್ ವಿಶ್ವನಾಥ್ ನೇಮಕವಾಗಿದ್ದಾರೆ. ರಾಜ್ಯಾಧ್ಯಕ್ಷರ ಕಾರ್ಯ ನಿರ್ವಹಣಾ ತಂಡಕ್ಕೆ ಪುಟ್ಟರಾಜು, ಸಾರಾ ಮಹೇಶ್, ಬಂಡೆಪ್ಪ ಕಾಶಂಪುರ್, ಬಿಬಿ ನಿಂಗಯ್ಯ, ಚಿಕ್ಕಮಾಧು ಸಿ ಆರ್ ಮನೋಹರ್. ಹಿರಿಯ ಉಪಾಧ್ಯಕ್ಷರಾಗಿ ಟಿ.ಎ. ಸರವಣ, ವೈ ಎಸ್ ವಿ ದತ್ತಾ, ಕೆ ಬಿ ಗೋಪಾಲಕೃಷ್ಣ, ಅಮರನಾಥ್ ಶೆಟ್ಟಿ, ಜಿ ರಾಮರಾಜ್ ಹಾಗೂ ಉಪಾಧ್ಯಕ್ಷರಾಗಿ ನಾನಾ ಗೌಡ ಬಿರಾದಾರ್, ಬಸವರಾಜು ಮಡಿಕೇರಿಯನ್ನು ನೇಮಿಸಲಾಗಿದೆ.
Comments