ವಿಶ್ವದ ಅತಿದೊಡ್ಡ ಹಾಲು ಉತ್ಪಾದನಾ ಘಟಕಕ್ಕೆ ಭೇಟಿ ಕೊಟ್ಟ ಎಚ್ ಡಿಕೆ
ಜಗತ್ತಿನ ಅತಿದೊಡ್ಡ ಡೈರಿ ಪಾರ್ಮ್ ಅಫಿಮಿಲ್ಕ್ ಇಂದು ಇಸ್ರೇಲಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಜಗತ್ತಿನ ಅತೀ ದೊಡ್ಡ ಡೈರಿ ಫಾರ್ಮ್ ಜೋರ್ಡಾನಿನ ಅಫಿಮಿಲ್ಕಿಗೆ ಭೇಟಿ ನೀಡಿ ಹಲವಾರು ಮಾಹಿತಿಗಳನ್ನು ಪಡೆದುಕೊಂಡರು.
ಅಫಿಮಿಲ್ಕ್ ಅತ್ಯುನ್ನತ ತಂತ್ರಜ್ಞಾನವನ್ನು ಪಶು ಸಂಗೋಪನೆಯಲ್ಲಿ ಅಳವಡಿಸಿಕೊಂಡಿದ್ದು ಇಲ್ಲಿರುವ ಹಸುಗಳು ವರ್ಷವೊಂದಕ್ಕೆ ಸರಾಸರಿ ಹನ್ನೆರಡು ಸಾವಿರ ಲೀಟರ್ ಹಾಲನ್ನು ನೀಡುತ್ತಿದೆ.ಇದು ಜಗತ್ತಿನಲ್ಲೆ ಅತೀ ಹೆಚ್ಚಿನ ಪ್ರಮಾಣದಾಗಿದ್ದು ಪಶು ಸಂಗೋಪನೆ ಇಸ್ರೇಲಿನ ರೈತರಿಗೆ ಲಾಭದಾಯಕವಾಗುವಂತೆ ಮಾಡುವಲ್ಲಿ ಇಲ್ಲಿನ ಅಫಿಮಿಲ್ಕ್ ಪಾತ್ರ ಹಿರಿದಾಗಿದೆ.
Comments