ಫೀಲ್ಡ್ಗಿಳಿದ ದೇವೇಗೌಡರು : ಟಿಕೆಟ್ ಹಂಚೋದು ನಾನೇ

ಬೆಂಗಳೂರು : ರಾಷ್ಟ್ರೀಯ ಪಕ್ಷಗಳು ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿವೆ. ಪ್ರಾದೇಶಿಕ ಪಕ್ಷವಾಗಿ ನಾವು ಸುಮ್ಮನಿದ್ದರೆ ಹಿಂದೆ ಬೀಳುತ್ತೇವೆ. ಹೀಗಾಗಿ, ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಆರ್ಥಿಕವಾಗಿ ಪಕ್ಷ ದುರ್ಬಲವಾಗಿರುವುದು ನಿಜ. ಆದರೆ, ಸಾಮೂಹಿಕ ಹೋರಾಟ ನಡೆಸುತ್ತೇವೆ. ಇನ್ನೂ ಅಧ್ಯಕ್ಷ, ಕಾರ್ಯಾಧ್ಯಕ್ಷ, ಕಾರ್ಯರರ್ಶಿ ಸ್ಥಾನಗಳ ಬದಲಾವಣೆ ಮಾಡುವುದಿಲ್ಲ. ಸೆಪ್ಟೆಂಬರ್ 22 ರಂದು ಬೃಹತ್ ಸಮಾವೇಶ ನಡೆಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದಿದ್ದಾರೆ.
ಇದೇವೇಳೆ, ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ 7 ತಂಡಗಳನ್ನ ರಚಿಸಲಾಗಿದ್ದು, 2 ವಾರಗಳಿಗೊಮ್ಮೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ದೇ ಹಲವು ತಿಂಗಳೂಗಳ ಹಿಂದೆಯೇ ಅಭ್ಯರ್ಥಿಗಳ ಪಟ್ಟಿ ಸಹ ಸಿದ್ಧವಾಗಿತ್ತು. ಆದರೆ, ಕುಮಾರಸ್ವಾಮಿಯವರನ್ನ ನಾನೇ ತಡೆದೆ. ಬೇರೆ ಪಕ್ಷಗಳ ನಡೆ ನೋಡಿಕೊಂಡು ನಿರ್ಣಯ ಕೈಗೊಳ್ಳುತ್ತೇವೆ. ಅಭ್ಯರ್ಥಿಗಳ ಹೆಸರು ಪ್ರಕಟಿಸುವ ದಿನಾಂಕ ನಾನೇ ಪ್ರಕಟಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.
Comments