ಕಾಂಗ್ರೆಸ್‍ನೊಂದಿಗೆ ಬಿಬಿಎಂಪಿ ಮೈತ್ರಿ ಮುರಿದುಕೊಳ್ಳುವರ ಗೌಡರು ?

ಬಿಬಿಎಂಪಿಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮುಂದುವರೆಸುವುದಾಗಿ ನಾವೇನು ಬಾಂಡ್ ಬರೆದುಕೊಟ್ಟಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಕಾಂಗ್ರೆಸ್‍ಗೆ ಬೆಂಬಲ ಕೊಟ್ಟಿದ್ದೇವೆ. ಅಧಿಕಾರ ಹಂಚಿಕೊಂಡು ಆಡಳಿತ ನಡೆಸುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ನಾವೇನು ಅವರಿಗೆ ಬರೆದು ಕೊಟ್ಟಿಲ್ಲ. ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಜನರೂ ಕೂಡ ನಮ್ಮನ್ನು ಕೇಳುತ್ತಾರೆ. ಅವರೊಂದಿಗೆ ಯಾಕಿದ್ದೀರಾ ಅಂತ. ಅವರಿಗೆ ನಾವು ಉತ್ತರ ಕೊಡಬೇಕು ಎಂದು ಮಾರ್ಮಿಕವಾಗಿ ಗೌಡರು ಹೇಳಿದರು.
Comments