ಕೃಷಿ ಅಧ್ಯಯನಕ್ಕೆ ಹೋಗುವ ಮುನ್ನ ಎಚ್ಡಿಕೆ ಹೇಳಿದ್ದೇನು?
ಬೆಂಗಳೂರು: ಹನಿ ನೀರಾವರಿ, ತುಂತುರು ನೀರಾವರಿ ಹಾಗೂ ಕಡಿಮೆ ನೀರಿನಲ್ಲಿ ಯಶಸ್ವಿ ಕೃಷಿ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ತಂಡ 5 ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದೆ.
ಐದು ದಿನಗಳ ಅಧ್ಯಯನ ಪ್ರವಾಸದ ಅವಧಿಯಲ್ಲಿ ಈ ತಂಡ ಇಸ್ರೇಲ್ ದೇಶದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು, ಹನಿ ನೀರಾವರಿ, ತುಂತುರು ನೀರಾವರಿ, ಕಡಿಮೆ ನೀರಿನಲ್ಲಿ ಯಶಸ್ವಿ ಕೃಷಿ ಚಟುವಟಿಕೆಗಳು ಸಹಿತ ಒಟ್ಟಾರೆ ನೀರಿನ ಮಿತ ಬಳಕೆ ಮತ್ತು ಸದ್ಬಳಕೆ ಬಗ್ಗೆ ಅಧ್ಯಯನ ನಡೆಸಲಿದೆ ಎನ್ನಲಾಗಿದೆ.
ಪತ್ರಕರ್ತರಿಗೆ, ಮಾಹಿತಿ ನೀಡಿದ ಎಚ್.ಡಿ. ಕುಮಾರಸ್ವಾಮಿ, ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಆ. 27ರಿಂದ ಸೆ. 8ರ ವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
Comments