ಕಾಂಗ್ರೆಸ್, ಬಿಜೆಪಿ ಗಿಂತ ನಾವು ಮುಂದಿರ್ತೇವೆ - ಎಚ್ ಡಿಕೆ
ಜೆಡಿಎಸ್ ಪಕ್ಷಕ್ಕೆ ಬಹುಮತ ಕೊಟ್ಟು ನೋಡಿ. ಹೇಗೆ ಆಡಳಿತ ಮಾಡಬೇಕು ಅಂತಾ ಮೋದಿಗೂ ತೋರಿಸಿಕೊಡ್ತಿನಿ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಮಿಷನ್ 113 ಗುರಿ. 113ರ ಮೇಲೆ ಎಷ್ಟಾದರು ಬರಲಿ. ಆದರೆ ನನ್ನ ಮೂಲ ಟಾರ್ಗೆಟ್ 113. ಅಷ್ಟು ಸ್ಥಾನ ಬರುತ್ತವೆ ಎಂಬ ವಿಶ್ವಾಸ ಇದೆ. ಸಿಫೋರ್ ಸಮೀಕ್ಷೆ ಉಲ್ಟಾ ಆಗತ್ತೆ. ಕಾಂಗ್ರೆಸ್‌ಗೆ 25-30 ಸ್ಥಾನ ಬರತ್ತೆ. ಬಿಜೆಪಿಗಿಂತ ನಾವು 10-15 ಸ್ಥಾನ ಮುಂದಿರ್ತೇವೆ. ಇದು ಚಾಲೆಂಜ್ ಎಂದಿದ್ದಾರೆ.ನಾನು ಹಣಕೊಟ್ಟು ಸರ್ವೆ ಮಾಡಿಸಿದ್ದೇನೆ. ಸೆಂಟ್ರಲ್ ಮತ್ತು ರಾಜ್ಯ ಗುಪ್ತದಳ ಮಾಹಿತಿ ಪ್ರಕಾರ ಜೆಡಿಎಸ್ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೇ ಹೇಳ್ತಿದ್ದಾರೆ. ಜೆಡಿಎಸ್‌ಗೆ 60 ಕ್ಕೂ ಹೆಚ್ಚು ಸ್ಥಾನ ಬರತ್ತೆ ಅಂತಾ. ಈಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ನೀಡಿ ಎನ್ನುತ್ತಿದ್ದಾರೆ ಎಂದರು.ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಇಸ್ರೇಲ್ ಮಾದರಿ ಕೃಷಿಗೆ ಒತ್ತು ಕೊಡಲಾಗುವುದು. ಇಸ್ರೇಲ್‌ನಿಂದ ಪರಿಣತರ ತಂಡ ಕರೆಸಿ ಅಲ್ಲಿಯ ಸಿಸ್ಟಂ ಇಲ್ಲಿ ಅಳವಡಿಸುತ್ತೇನೆ. ಎಷ್ಟು ಖರ್ಚಾದರೂ ಪರವಾಗಿಲ್ಲ. ಈ ಬಾರಿಅಭಿವೃದ್ಧಿ ಅಜೆಂಡಾ ಮೂಲಕ ಚುನಾವಣೆ. ಯಾರ ಮೇಲೂ ಆರೋಪ ಮಾಡುತ್ತಾ ಕೂರಲ್ಲ ಎಂದರು.
Comments