ಗಣಪತಿ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರದ ಬಳಿ ಪರಿಣಿತರಿದ್ದಾರೆ’

26 Aug 2017 3:52 PM |
554 Report

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ಪ್ರಕರಣ ಮುಚ್ಚಿ ಹಾಕುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಇಂತಹ ಪ್ರಕರಣಗಳನ್ನ ಮುಚ್ಚಿ ಹಾಕಲೆಂದೇ ಇವರ ಬಳಿ ಪರಿಣಿತರ ತಂಡವೇ ಇದೆ. ಕೆಂಪಯ್ಯನವರಂತಹವರು ಇರುವುದೇ ಇದಕ್ಕಾಗಿ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 
ಎಂಕೆ ಗಣಪತಿ ಸಾವಿಗೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿತ್ತು ಎಂಬ ವರದಿಗಳ ಬೆನ್ನಲ್ಲಿ ಕುಮಾರ  ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

Edited By

hdk fans

Reported By

hdk fans

Comments