ಕೃಷಿ ಅಧ್ಯಯನಕ್ಕಾಗಿ ಇಂದು ಇಸ್ರೇಲ್‍ಗೆ ತೆರಳಲ್ಲಿದಾರೆ ಹೆಚ್ಡಿಕೆ ಅಂಡ್ ಟೀಮ್
ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ತಂಡ ಇಂದು ಇಸ್ರೇಲ್‍ಗೆ ತೆರಳಲಿದೆ.
ಇಸ್ರೇಲ್ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಲು ಕುಮಾರಸ್ವಾಮಿ ನೇತೃತ್ವದಲ್ಲಿ 6 ಜನರ ತಂಡ ಪ್ರವಾಸ ಕೈಗೊಂಡಿದೆ. ಐದು ದಿನಗಳ ಕಾಲ ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಬಳಸುತ್ತಿರುವ ತಂತ್ರಜ್ಞಾನ, ಹನಿನೀರಾವರಿ, ತುಂತುರು ನೀರಾವರಿ, ಮೇಕೆ, ಕೋಳಿ, ಹಸು ಸಾಕಾಣಿಕೆ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಜೊತೆಗೆ ಅಂತರ್ಜಲ ನಿರ್ವಹಣೆ, ಕಡಿಮೆ ನೀರಿನಲ್ಲಿ ಉತ್ತಮ ಕೃಷಿ ಮಾಡುವ ಆಧುನಿಕ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೇಲ್‍ಗೆ ಪ್ರವಾಸ ಕೈಗೊಂಡಿದ್ದಾರೆ. ತಂಡದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ರಂಗಪ್ಪ, ರೈತರು ಸೇರಿದಂತೆ ಆರು ಜನರ ತಂಡ ಇಸ್ರೇಲ್‍ಗೆ ತೆ ರಳಿದೆ. ಇಂದು ಸಂಜೆ ದೆಹಲಿಯಿಂದ ಇಸ್ರೇಲ್‍ಗೆ ಪ್ರಯಾಣಿಸುವ ಈ ತಂಡ ಐದು ದಿನಗಳ ಕಾಲ ಅಲ್ಲಿನ ಕೃಷಿ, ತೋಟಗಾರಿಕೆ, ಪಶುಪಾಲನೆ ಬಗ್ಗೆ ಅಧ್ಯಯನ ನಡೆಸಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
Comments