ಸಿ ಫೋರ್ ಸಮೀಕ್ಷೆ ಕಾಂಗ್ರೆಸ್ ಕೃಪಾ ಪೋಷಿತ
ಬೆಂಗಳೂರು: "ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ಸಿ ಫೋರ್ ಸಮೀಕ್ಷೆ ಕಾಂಗ್ರೆಸ್ ಕೃಪಾ ಪೋಷಿತ. ಇಂತಹ ಸರ್ವೇಗಳಿಂದ ಸಿಎಂ ಸಿದ್ದರಾಮಯ್ಯ ಉಬ್ಬಬೇಕಿಲ್ಲ' ಎಂದು ತಿಳಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, "ನಾನೂ ವೈಯಕ್ತಿಕವಾಗಿ ರಾಜ್ಯದ ಪ್ರತೀ ಕ್ಷೇತ್ರದ ಸಮೀಕ್ಷೆ ಮಾಡಿಸಿದ್ದು ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ' ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾ
"ರಾಜ್ಯದ ಜನತೆ ಜೆಡಿಎಸ್‌ಗೆ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸುವ ಅಧಿಕಾರ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಗೂ ದೇಶದಲ್ಲಿ ಹೇಗೆ ಆಡಳಿತ ನಡೆಸಬೇಕೆಂದು ಪಾಠ ಹೇಳಿಕೊಡುತ್ತೇನೆ' ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿ ಫೋರ್ ಸಂಸ್ಥೆ ಸಮೀಕ್ಷೆ ಉಲ್ಟಾ ಆಗಲಿದ್ದು, ಜೆಡಿಎಸ್‌ಗೆ ಸಮೀಕ್ಷೆಯಲ್ಲಿ ಕೊಟ್ಟಿರುವ 32 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ಅಷ್ಟೇ ಅಲ್ಲ ಬಿಜೆಪಿಗಿಂತಲೂ 10 ರಿಂದ 15 ಸೀಟು ಹೆಚ್ಚು ಜೆಡಿಎಸ್ ಗೆಲ್ಲಲಿದೆ. ಇದು ನನ್ನ ಚಾಲೆಂಜ್' ಎಂದು ಹೇಳಿದರು.
"ಸಿ ಫೋರ್ ಸಂಸ್ಥೆ ಅಧ್ಯಕ್ಷ ರಾಜ್ಯ ಸರ್ಕಾರದ ವಿಷನ್ ಗ್ರೂಪ್ ಸದಸ್ಯ. ಕೆಂಪಯ್ಯ ಜತೆ ಫೋಟೋ ತೆಗೆಸಿಕೊಂಡು ವೆಬ್‌ಸೈಟ್‌ನಲ್ಲಿ ಹಾಕಿದ್ದಾರೆ. ಇಂಥವರು ಕಾಂಗ್ರೆಸ್ 132 ಸೀಟು ಗೆಲ್ಲುತ್ತೆ ಎಂದು ಹೇಳದೆ ಇರುತ್ತಾರಾ? 232 ಸ್ಥಾನ ಬರುತ್ತೆ ಅಂತಾನೂ ಹೇಳ್ತಾರೆ. ಸಿದ್ದರಾಮಯ್ಯ ಅವರು ತಾತ್ಕಾಲಿಕವಾಗಿ ಖುಷಿ ಪಟ್ಟು ಕೊಳ್ಳಲಿ' ಎಂದು ಲೇವಡಿ ಮಾಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಬಂದಾಗ ಇಲ್ಲಿನ ರೈತರು, ಜನರ ಸಮಸ್ಯೆ ಬಗ್ಗೆ ಒಂದೂ ಮಾತಾಡಲಿಲ್ಲ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಂದಿದ್ದಾಗಿ ಹೇಳಿದರು. ಇವರಿಗೆ ಕಾಳಜಿ ಇದೆಯಾ? ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಇದೆಯಾ ಎಂದು ಪ್ರಶ್ನಿಸಿದರು.
Comments