ಅಸೆಂಬ್ಲಿ ಚುನಾವಣೆ: ಕುಮಾರಸ್ವಾಮಿ ನಡೆಸಿದ ಸಮೀಕ್ಷೆಯಲ್ಲಿ ಹೇಳೋದೇನು?
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಮ್ಮ ಮೂಲಗಳಿಂದ ನಾವೂ ಸಮೀಕ್ಷೆ ನಡೆಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಸರ್ವೇಗೂ ನಮ್ಮ ಸರ್ವೇಗೂ ತಾಳೆಯಾಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಗುಪ್ತಚರದಳಗಳ ಮಾಹಿತಿ ಪ್ರಕಾರ ನಮ್ಮ ಪಕ್ಷ ಮುಂದಿದೆ, ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿ ಬಂದ ಸೀಟಿನ ಅರ್ಧದಷ್ಟೂ ಸೀಟು ಸಿಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಿಫೋರ್ ಸಂಸ್ಥೆಯ ಮುಖ್ಯಸ್ಥ ಪ್ರೇಮಚಂದ ಪಲೇಟಿ ಮತ್ತು ಕೆಂಪಯ್ಯ ಪರಮಾಪ್ತರು, ಹಾಗಾಗಿ ತಮಗೆ ಬೇಕಾದಂತೆ ಸಮೀಕ್ಷಾ ವರದಿಯನ್ನು ಸಿದ್ದಪಡಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಖಾಸಗಿವರಿಂದ ಮತ್ತು ಗುಪ್ತಚರ ವರದಿಯ ಪ್ರಕಾರ ಜೆಡಿಎಸ್ ಎಲ್ಲರಿಗಿಂತ ಮುಂದೆ ಇದೆ ಸರ್ವೇ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಾವು ಖಾಸಗಿಯವರಿಂದ ನಡೆಸಿದ ಸಮೀಕ್ಷೆ ಮತ್ತು ಗುಪ್ತಚರ ವರದಿಯ ಪ್ರಕಾರ ಜೆಡಿಎಸ್ ಪಕ್ಷಕ್ಕೆ 113, ಕಾಂಗ್ರೆಸ್ಸಿಗೆ 24 ರಿಂದ 32 ಮತ್ತು ಬಿಜೆಪಿಗೆ 65 ರಿಂದ 70 ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಎಚ್ದಿಕೆ ಹೇಳಿದ್ದಾರೆ.
Comments