ಇಂದಿರಾ ಕ್ಯಾಂಟೀ ನಲ್ಲಿ ನೂಕುನುಗ್ಗಲು ಮುಗಿ ಬಿದ್ದ ಜನ ಹೇಳಿದ್ದೇನು ?
ನಗರದ 101 ಕಡೆಗಳಲ್ಲಿ ‘ಇಂದಿರಾ ಕ್ಯಾಂಟೀನ್’ಗಳು ಆರಂಭವಾಗಿದ್ದು, 5 ರೂ.ಗೆ ಬೆಳಿಗ್ಗಿನ ಉಪಹಾರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಹೆಚ್ಚಿನ ಕ್ಯಾಂಟೀನ್ಗಳಲ್ಲಿ ಆರಂಭವಾದ ಅರ್ಧ ಗಂಟೆಗಳಿಗೆ ಉಪಹಾರ ಮುಗಿದು ಜನರು ನಿರಾಶರಾಗಿ ಮರಳಿದ್ದಾರೆ.
ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಂದು ಬೆಳಿಗ್ಗೆ 5 ರೂ.ಗೆ ರವೆ ಉಪ್ಪಿಟ್ಟು, ಕೇಸರಿಬಾತು ನೀಡಿದ್ದರೆ, ಮತ್ತೆ ಕೆಲವು ಕ್ಯಾಂಟೀನ್‌ಗಳಲ್ಲಿ ಇಡ್ಲಿ ಮತ್ತು ಟಮೋಟೊ ಬಾತ್‌ನ್ನು ನೀಡಲಾಗಿದೆ. ಟಮೋಟೊ ಬಾತನ್ನು ಸಾವಿರಾರು ಮಂದಿ ತಿಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
80ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಇಂದು ಬೆಳಿಗ್ಗೆ 7.30ಕ್ಕೆ ತೆರೆದವು. ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಟೋರಿಕ್ಷಾ ಚಾಲಕರು, ಮಹಿಳೆಯರು ಸೇರಿದಂತೆ 500ಕ್ಕೂ ಹೆಚ್ಚು ಜನರು ಕ್ಯೂನಲ್ಲಿ ನಿಂತಿದ್ದರು.
7.30ಕ್ಕೆ ಸರಿಯಾಗಿ ಟೋಕನ್‌ಗಳನ್ನು ವಿತರಿಸಲಾಯಿತು. ಆರಂಭವಾದ ಅರ್ಧ ಗಂಟೆಗಳಲ್ಲಿ ತಿಂಡಿ ಮುಗಿದಿದೆ ಎಂದು ಬಹುತೇಕ ಕ್ಯಾಂಟೀನ್‌ಗಳಲ್ಲಿ ನಾಮಫಲಕ ಅಳವಡಿಸಿದ್ದರಿಂದ ಹೆಚ್ಚಿನ ಜನರು ತಿಂಡಿ ಸಿಗದೆ ನಿರಾಶರಾದರು.
ಬೆಂಗಳೂರಿನ ಜಯನಗರದ ಕನಕನಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಆಗಮಿಸಿದ್ದ ಜನರಿಗೆ ನಿಗದಿಯಂತೆ 200 ಗ್ರಾಂ ಉಪ್ಪಿಟ್ಟು, ಕೇಸರಿಬಾತ್ ನೀಡಲಾಗಿತ್ತು. 5 ರೂ.ಗೆ ನೀಡಿದ ತಿಂಡಿ ರುಚಿಯಾಗಿದೆ. ಆದರೆ ಇನ್ನೂ ಸ್ವಲ್ಪ ಜಾಸ್ತಿ ನೀಡಿದರೆ ಅನುಕೂಲ ಎನ್ನುವ ಮಾತು ಜನರಿಂದ ಕೇಳಿ ಬಂತು.
Comments