ಎಚ್.ಡಿ ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಬರುತ್ತಿದ್ದಾರೆ ಪ್ರಜ್ವಲ್!

ಬೆಂಗಳೂರು: ಹುಣಸೂರು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸೂಟ್ ಕೇಸ್ ಸಂಸ್ಕೃತಿಯ ಬಾಂಬ್ ಸಿಡಿಸಿ ಪಕ್ಷದ ವರಿಷ್ಟರಿಗೆ ಮುಜುಗರ ತರಿಸಿದ್ದ ಪ್ರಜ್ವಲ್ ಈಗ ತುಳಿದಿರುವ ಹಾದಿ ನೋಡಿದ್ರೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಗೌಡರ ಕುಟುಂಬದಲ್ಲಿ ಯಾದವೀ ಕಲಹ ಮುಂದುವರಿದಂತಿದೆ. ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿಗೆ ಸೆಡ್ಡು ಹೊಡೆಯಲು ಪ್ರಜ್ವಲ ತಯಾರಿ ನಡೆಸುತ್ತಿದ್ದಾರೆ. ಅವರಿಗೆ ಸೆಡ್ಡು ಹೊಡೆಯಲು ಪ್ರಜ್ವಲ್ ರೇವಣ್ಣ ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಹುರಿಯಾಳಾಗಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.
ಕೆಲವು ದಿನಗಳಿಂದ ಕ್ಷೇತ್ರದ ಒಡನಾಡ ಹೆಚ್ಚಿಸಿಕೊಂಡಿರುವ ಪ್ರಜ್ವಲ್, ಸ್ಥಳೀಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಸಹಕಾರ ಹಾಗೂ ಬೆಂಬಲ ಕೇಳುತ್ತಿದ್ದಾರೆ.
Comments