ತಳಮಟ್ಟದ ಮಂತ್ರಕ್ಕಾಗಿ 'ಕೈ' ತಂತ್ರ!

16 Aug 2017 1:13 PM |
2778 Report

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಮೂರು ದಿನಗಳಿಂದ ನಿರಂತರ ಸಭೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡರು ಮಿಷನ್ 150 ಎಂಬುದನ್ನು ಹೇಳುತ್ತಿರುವುದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಸಹ ಭಾನುವಾರ ಫಸ್ಟ್ ಟೈಮ್ ಕಾಂಗ್ರೆಸ್ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಸಿಎಂ ಸಿದ್ದರಾಮಯ್ಯ ಸದ್ದಿಲ್ಲದೇ ಹೊಸ ತಂತ್ರವನ್ನು ರೂಪಿಸುತ್ತಿದ್ದಾರೆ ರಾಜಕೀಯ ವಲಯದಲ

ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ರೂಪಿಸಿದ ಹೊಸ ತಂತ್ರ ಯಾವುದು ಎಂಬುದನ್ನು ನೋಡುವುದಾದರೆ,

ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ಬಿಜೆಪಿ ಪಕ್ಷಕ್ಕೆ ಟಾನಿಕ್ ಆಗಿದ್ದರೆ, ಇತ್ತ ಕಾಂಗ್ರೆಸ್ ಕೂಡ ಸದ್ದಿಲ್ಲದೇ ಎಲೆಕ್ಷನ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಲ್ಲೂ ಕಾಂಗ್ರೆಸ್ ಹೊಸ ತಂತ್ರವೆಂದರೆ ಅದು ಲಿಂಗಾಯತ ಪ್ರತ್ಯೇಕ ಧರ್ಮ, ಕನ್ನಡ ಧ್ವಜ ಎಂಬ ಎರಡು ವಿಷಯಗಳ ಮೂಲಕ ಬಿಜೆಪಿಯನ್ನು ಹಿಂದಿಕ್ಕಲು ಪ್ಲ್ಯಾನ್ ಮಾಡಿದೆ. ಈ ಎರಡೂ ವಿಷಯಗಳ ಬುಡಕ್ಕೆ ಕಾಂಗ್ರೆಸ್ ಕೈ ಹಾಕಿದೆ. ತಳಮಟ್ಟದಿಂದ ಪಕ್ಷ ಸಂಘಟನೆಯತ್ತ ಕಾಂಗ್ರೆಸ್ ದೃಷ್ಟಿ ಹರಿಸಿದೆ.

ಇನ್ನು ಕಾಂಗ್ರೆಸ್ ಸೋತವರಿಗೆ ಹೆಚ್ಚಿನ ಆದ್ಯತೆ ನೀಡುವುದಕ್ಕಾಗಿ ತಂತ್ರ ರೂಪಿಸಿದೆ. ಕಾಂಗ್ರೆಸ್ನಲ್ಲಿ 25 ಅಭ್ಯರ್ಥಿಗಳು 5 ಸಾವಿರ ಮತಗಳಿಂದ ಸೋತಿದ್ದಾರೆ. ಅವರಲ್ಲಿ 10 ಮಂದಿಯದ್ದು 1000 ಮತಗಳಷ್ಟೇ. ಹೀಗಾಗಿ ಅವರಿಗೆ ಟಿಕೆಟ್ ನೀಡುವ ಅಭಯ್ ನೀಡಿ ಕ್ಷೇತ್ರಗಳಲ್ಲಿ ಸಂಘಟನೆ ಯಲ್ಲಿ ಓಡಾಡಿಕೊಂಡಿರುವುದಕ್ಕೆ ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೆಪಿಸಿಸಿ ನೇಮಕವಾಗಿರುವ 96 ಕಾರ್ಯದರ್ಶಿಗಳಿಗೆ ಪ್ರತಿಯೊಬ್ಬರಿಗೆ ಎರಡು ಕ್ಷೇತ್ರಗಳ ಚುನಾವಣೆ ಹೊಣೆಗಾರಿಕೆ ನೀಡಲಾಗಿದೆ. ಕ್ಷೇತ್ರಗಳಲ್ಲಿ ಕಂಡು ಬಂದರೆ ಎಐಸಿಸಿ ಕಾರ್ಯದರ್ಶಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ. ಕಾರ್ಯತಂತ್ರ ರೂಪಿಸುತ್ತಿದೆ. ಇತ್ತ ಚುನಾವಣೆಗೆ ಸಿದ್ಧವಾಗುತ್ತಿದೆ.

Edited By

congress admin

Reported By

congress admin

Comments