ಜೆಡಿಎಸ್ ಇಲ್ಲದೇ ಹೋದ್ರೆ ಇನ್ನಿತರ ಪಕ್ಷಗಳು ಸರ್ಕಾರ ರಚಿಸಲು ಸಾಧ್ಯವಾ?!
ಬೆಂಗಳೂರು: ಈಗ ಎಲ್ಲರ ಚಿತ್ತ ರಾಜ್ಯದಲ್ಲಿ 2018ರಲ್ಲಿ ಕರ್ನಾಟಕ ಚುನಾವಣೆ ಕಡೆಗೆ. ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ರಾಜಕೀಯ ರಣತಂತ್ರ ಹೆಣೆಯುವಲ್ಲಿ ಗಮನ ಹರಿಸಿದೆ. ಇತ್ತ ಬಿಜೆಪಿ ಕೂಡ ರಾಜ್ಯದ ಎಲ್ಲಡೆ ಪ್ರವಾಸ ಕೈಗೊಂಡಿದೆ. ಇದರ ಮಧ್ಯೆ ಜೆಡಿಎಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವಲ್ಲಿ ದೃಷ್ಠಿ ನೆಟ್ಟಿದೆ.
ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಶತಾಯು ಗತಾಯು ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಗೌಡರು ನಿರ್ಧರಿಸುವೆಂಬತ್ತಿದೆ. ಯಾಕಂದ್ರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಸರ್ಕಾರಗಳ ವೈಫಲ್ಯ ಮತ್ತು ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರದ ನ್ಯೂನತೆಗಳನ್ನು ಇಟ್ಟುಕೊಂಡು ರಾಜ್ಯಾದಂತ್ಯ ಈಗಾಗ್ಲೇ ಕುಮಾರಸ್ವಾಮಿ ಹಾಗೂ ದೇವೇಗೌಡರು ಸಂಚಾರ ಮಾಡಿ ರಾಜ್ಯಾದಂತ್ಯ ಹೊಸ ಹೊಸ ಯೋಜನೆಗಳೊಂದಿಗೆ ಯುವಕರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ.
ಕುಮಾರ ಪಥವೇ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ. ಯವಕರನ್ನು ಹಾಗೂ ಪ್ರಜ್ಞಾವಂತರನ್ನು ನೇರವಾಗಿ ತಲುಪುತ್ತಿದ್ದು, ಜನರಿಗೆ ಬೇಕಾದ ಕೆಲಸ ತಾವು ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಜೆಡಿಎಸ್ ನೀಡುತ್ತಿದೆ.
ಹಾಗೂ ಆನ್ ಲೈನ್ ನಲ್ಲೂ ಜೆಡಿಎಸ್ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಿದ ತಂತ್ರವನ್ನೇ ಜೆಡಿಎಸ್ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜೋರಾಗಿ ಕ್ಯಾಂಪೇನ್ ನಡೆದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಜ್ಞಾವಂತರ ಮತಗಳನ್ನು ತನ್ನತ್ತ ಸೆಳೆಯುವ ಉದ್ದೇಶ ಜೆಡಿಎಸ್ ಹೊಂದಿದೆ. ಇದು ಜೆಡಿಎಸ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಲು ಸಹಾಯಕಾರಿ
ಯಾಗಲಿದೆ. ಇದು ಪಾಸಿಟಿವ್ ಯಶಸ್ಸು ರೂಪಿಸುವಲ್ಲಿ ಯಶಸ್ಸು ಕಂಡಿದೆ. ಫೇಸ್ ಬುಕ್ ನಲ್ಲಿ ಜೆಡಿಎಸ್ ನ ಅನೇಕ ಪೇಜ್ ಗಳು ಗ್ರೂಪ್ ಗಳು ಕಾಣಸಿಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್, ಬಿಜೆಪಿಗಿಂತಲೂ ಜೆಡಿಎಸ್ ಮುಂದೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣಾ ಪ್ರಚಾರಕ್ಕಾಗಿ ಸದ್ದಿಲ್ಲದೇ ಆನ್ ಲೈನ್ ಘಟಕವನ್ನು ಗಟ್ಟಿ ಮಾಡಿಕೊಂಡಿರುವ ಜೆಡಿಎಸ್ ಕುಮಾರ ಪಥ 2018ರ ಕಾರ್ಯಕ್ರಮಗಳಿಂದ ಜನರಿಗೆ ಹತ್ತಿರ ವಾಗುವ ಕೆಲಸ ಮಾಡುತ್ತಿದೆ.
Comments