ಹಾಸನದಲ್ಲಿ ಐಐಟಿ ಸ್ಥಾಪನೆಗೆ ಮನವಿ ಮಾಡಿದ ದೇವೇಗೌಡ್ರು
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ.
ದೆಹಲಿಯಲ್ಲಿ ಗುರುವಾರ ಪ್ರಧಾನಿ ಮೋದಿ ಅವರನ್ನು ಅವರ ಕಚೇರಿಯಲ್ಲಿ ದೇವೇಗೌಡರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಪ್ರಧಾನಿ ಅವರ ಮುಂದಿಟ್ಟರು. ಈ ಪೈಕಿ ಹಾಸನದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್ ಆರಂಭಿಸುವಂತೆ ಮನವಿ ಮಾಡಿದ್ದು ಪ್ರಮುಖವಾಗಿದೆ.
ಮುಂದಿನ ಬಜೆಟ್ನಲ್ಲಿ ಇದು ಈಡೇರಬೇಕು. ಇದಕ್ಕಾಗಿ ಕಾಯ್ದಿಟ್ಟಿರುವ 1057 ಎಕರೆ ಭೂಮಿ ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಕೇಳಿಕೊಂಡರು.
Comments