ಜಂತಕಲ್ ಮೈನಿಂಗ್ ಪ್ರಕರಣ: ಹೆಚ್'ಡಿಕೆಗೆ ನಿರೀಕ್ಷಣಾ ಜಾಮೀನು

10 Aug 2017 4:21 PM |
1576 Report

ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್'ಡಿ ಕುಮಾರಸ್ವಾಮಿಯವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಹೈಕೋರ್ಟ್'ನ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ ಕೆಲವು ಷರತ್ತುಗಳನ್ನು ಕೂಡ ಕೋರ್ಟ್ ವಿಧಿಸಿದೆ. ಸುಪ್ರೀಂ ಕೋರ್ಟ್'ಗೆ ಅಂತಿಮ ವರದಿ ಸಲ್ಲಿಸುವವರೆಗೂ ಜಾಮೀನಿನ ಅವಧಿ ಇರುತ್ತದೆ. ಅಲ್ಲದೆ ಪ್ರತೀ ಸೋಮವಾರ ಅಥವಾ ಗುರುವಾರ ಕುಮಾರಸ್ವಾಮಿಯವರು ಎಸ್'ಐಟಿ ಕಛೇರಿಗೆ ತೆರಳಿ ಸಹಿ ಮಾಡಿ ಬರಬೇಕು. ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಅಲ್ಲದೇ, ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆಯೂ ಕುಮಾರಸ್ವಾಮಿಯವರಿಗೆ ಕೋರ್ಟ್​​ ಸೂಚನೆ ನೀಡಿದೆ.

Edited By

hdk fans

Reported By

hdk fans

Comments