ಅಮಿತ್ ಶಾ ರಾಜ್ಯ ಪ್ರವಾಸದ ವೇಳಾಪಟ್ಟಿ

08 Aug 2017 7:39 PM |
8165 Report

ಆಗಸ್ಟ್ 12ರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಮಾಡಲಿದ್ದಾರೆ. ಅವರ ಮೂರು ದಿನಗಳ ಪ್ರವಾಸದ ವೇಳಾಪಟ್ಟಿಯನ್ನು ರಾಜ್ಯ ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಇಂದು ಬಿಡುಗಡೆ ಮಾಡಿದರು.

ಮೊದಲ ದಿನ - ಆಗಸ್ಟ್ 12, ಶನಿವಾರ 10-45: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ ಬೆಂಗಳೂರು-ಬಳ್ಳಾರಿ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಸ್ವಾಗತ ಕಾರ್ಯಕ್ರಮ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಗೆ ಆಗಮನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗ್ರಂಥಾಲಯ ಉದ್ಘಾಟನೆ ರಾಜ್ಯ ಬಿಜೆಪಿ ಪದಾಧಿಕಾರಿಗಳು, ಉಸ್ತುವಾರಿ, ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಭಾಷಣ ಶಾಸಕರು ಮತ್ತು ಸಂಸದರ ಜತೆ ಸಂವಾದ ಬುದ್ದಿಜೀವಿಗಳು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ

ಎರಡನೇ ದಿನ - ಆಗಸ್ಟ್ 13, ಭಾನುವಾರ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಭಾಗಿ ಮಂಡ್ಯದ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ಸಂಜೆ ಪಕ್ಷದ ವಿವಿಧ ಯೋನೆಗಳು ಮತ್ತು ವಿಭಾಗಗಳ ಸಂಚಾಲಕರನ್ನು ಉದ್ದೇಶಿಸಿ ಭಾಷಣ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ, ಶ್ರೀ ಶ್ರೀ ರವಿಶಂಕರ್ ಜತೆ ಸಮಾಲೋಚನೆ.

ಮೂರನೇ ದಿನ - ಆಗಸ್ಟ್ 14, ಸೋಮವಾರ ವಿಸ್ತಾರಕರನ್ನುದ್ದೇಶಿಸಿ ಭಾಷಣ ಕಳೆದ ಬಾರಿ ಸೋತ ಲೋಕಸಭಾ ಕ್ಷೇತ್ರಗಳ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂವಾದಕ್ಕಾಗಿ ಸಮಯ ಮೀಸಲು ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ತಂಡಗಳ ಜತೆ ಸಂವಾದ ಇತ್ತೀಚೆಗೆ ಪಕ್ಷ ಸೇರಿದ ಮುಖಂಡರ ಜತೆ ಸಂವಾದ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ನಾಯಕರ ಜತೆ ಪ್ರತ್ಯೇಕ ಸಂವಾದ ಒಬಿಸಿ ನಾಯಕರ ಜತೆ ಪ್ರತ್ಯೇಕ ಸಂವಾದ ಇವಿಷ್ಟು ಕಾರ್ಯಕ್ರಮಗಳು ಪ್ರವಾಸದ ವೇಳೆ ನಿರ್ಧಾರವಾಗಿವೆ. ನಂತರ ಅಮಿತ್ ಶಾ ಕರ್ನಾಟಕದಿಂದ ನಿರ್ಗಮಿಸಲಿದ್ದಾರೆ.

Edited By

Admin bjp

Reported By

Admin bjp

Comments