ಕೇಂದ್ರ ಸರ್ಕಾರ ದಿಂದ ಶಾದಿ ಶಗುನ್ ಯೋಜನೆ

07 Aug 2017 5:48 PM |
4129 Report

ಮುಸ್ಲಿಂ ಯುವತಿಯರ ಉನ್ನತ ಶಿಕ್ಷಣ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ 51,000 ರೂ. ಪ್ರೋತ್ಸಾಹ ಧನ ನೀಡುವ ಯೋಜನೆಯ ಜಾರಿಗೆ ಮುಂದಾಗಿದೆ. ಪದವಿ ಮುಗಿಸಿದ ಅಲ್ಪ ಸಂಖ್ಯಾತ ಯುವತಿಯರಿಗೆ ಈ ಸೌಲಭ್ಯ ಸಿಗಲಿದೆ.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧೀನ ಸಂಸ್ಥೆ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್  ಶೈಕ್ಷಣಿಕ  ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ಮುಂದಾಗಿದೆ. ಮುಸ್ಲಿಂ ಯುವತಿಯರ ವಿಶ್ವವಿದ್ಯಾಲಯ ಹಂತದ ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಲು ಈಯೋಜನೆ ಜಾರಿಗೊಳಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈ ಯೋಜನೆಗೆ ಶಾದಿ ಶಗುನ್ ಎಂದು ಹೆಸರಿಡಲಾಗಿದೆ.

ಇತ್ತೀಚೆಗೆ ಅಲ್ಪಸಂಖ್ಯಾತ  ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮುಸ್ಲಿಂ ಯುವತಿಯರಿಗೆ ವಿದ್ಯಾರ್ಥಿ ವೇಯನ ಯೋದಗಿಸುವ ಕುರಿತು ಮಾತುಕತೆ ನಡೆಸಿ ಅಂತಿಮ ಮುದ್ರೆ ಒತ್ತಿದ್ದರು. ಇದರ ಜೊತೆಗೆ 9 ಮತ್ತು 10ನೇ ತರಗತಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ 10 ಸಾವಿರೂ. ಮತ್ತು 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ 12 ಸಾವಿರ ರೂ. ಸ್ಕಾಲರ್ ಶಿಪ್ ಸಿಗಲಿದೆ.

Edited By

Admin bjp

Reported By

Admin bjp

Comments