ಗೌಡರ ಮನವಿಗೆ ಸಮ್ಮತಿ ಸೂಚಿಸಿದ ಸಿಎಂ ಸಿದ್ದರಾಮಯ್ಯ

05 Aug 2017 3:24 PM |
3204 Report

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಮಾವತಿ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡಲು ಸಮ್ಮತಿ ಸೂಚಿಸಿದ್ದಾರೆಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾವೇರಿ ಕಣಿವೆ ಜಿಲ್ಲೆಗಳ ಉಸ್ತುವಾರಿ ಸಚಿವರ ಸಭೆಯ ಬಳಿಕ ಮಾತನಾಡಿ, ಕಾವೇರಿ ಜಲಾನಯನದ ನಾಲ್ಕು ಜಲಾಶಯಗಳಲ್ಲಿ  ಒಟ್ಟು  43 ಟಿಎಂಸಿ ನೀರು ಸಂಗ್ರಹವಿದೆ. ತಮಿಳುನಾಡಿಗೆ ಇಲ್ಲಿವರೆಗೆ 9 ಟಿಎಂಸಿ ನೀರು ಬಿಡಲಾಗಿದೆ. ಬೆಂಗಳೂರು, ಮೈಸೂರು ಜನರಿಗೆ ಕುಡಿಯಲು 34 ಟಿಎಂಸಿ ನೀರಿನ ಅಗತ್ಯತೆ ಇದೆ. ಇದೇ ವೇಳೆ, ಇದೇ 14 ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಸಭೆಯಲ್ಲಿ ಕಾವೇರಿ ಕಣಿವೆ ಸಧ್ಯದ ಸ್ಥಿತಿಗತಿಗಳ ಬಗ್ಗೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ದೇವೇಗೌಡರ ಮನವಿ ಮೇರೆಗೆ  ಹೇಮಾವತಿ ಜಲಾಶಯದಿಂದ ಒಂದು ಟಿಎಂಸಿ ಕುಡಿಯಲು ಬಿಡಲಾಗುತ್ತಿದೆ. ಹತ್ತು ದಿನಗಳ ಕಾಲ ನೀರು ಬಿಡುತ್ತಿದ್ದೇವೆ. ಇದೇ ಭಾನುವಾರದಿಂದ ಒಂದು ವಾರ ನೀರು ಬಿಡುಗಡೆ. ಕೆರೆ ತುಂಬಿಸಲು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಬಿಡುತ್ತಿದ್ದೇವೆ. ಯಾವುದೇ ಬೆಳೆಗಳಿಗೆ ನೀರು ಬಿಡುತ್ತಿಲ್ಲ. ಈ ಬಗ್ಗೆ ಎಚ್ ಡಿ ದೇವೇಗೌಡರ ಕೂಡ ಒತ್ತಾಯ ಮಾಡಿದ್ದರು ಎಂದು ಹೇಳಿದರು.

Edited By

jds admin

Reported By

jds admin

Comments