ಐಟಿ ದಾಳಿಗೆ ಗೌಡರ ತಿರುಗೇಟು
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರದಲ್ಲಿರುವವರು ಅವರ ಅಧಿಕಾರ ಚಲಾಯಿಸುತ್ತಾರೆ ನಾವೇನು ಮಾಡಕ್ಕಾಗಲ್ಲ ಎಂದು ಹೇಳಿದ್ದಾರೆ.
ರೈಡ್ ಆಗುತ್ತದೆ, ನನ್ನ ಮಗನ ಮೇಲೂ 11 ಬಾರಿ ರೈಡ್ ಆಗಿದೆ. ಇಂತಹ ದಾಳಿಗಳನ್ನು ನೋಡಿದ್ದೇನೆ. ಇಂತಹ ಆಟಗಳು ನನಗೆ ಹೊಸದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿರುವವರು ವಿಪಕ್ಷಗಳನ್ನು ಹಣಿಯಲು ಇಂತಹ ದಾಳಿಗಳನ್ನು ನಡೆಸುವುದನ್ನು ತುಂಬಾ ನೋಡಿದ್ದೇನೆ. ನಮಗೆ ಇದು ಹೊಸದಲ್ಲ ಎಂದು ಟಾಂಗ್ ನೀಡಿದ್ದಾರೆ.
Comments