ಇಂದಿನಿಂದ ಅಪ್ಪಾಜಿ ಕ್ಯಾಂಟೀನ್ ಲೋಕಾರ್ಪಣೆ , 5 ರೂ. ಗೆ ತಿಂಡಿ, 10 ರೂ.ಗೆ ಮುದ್ದೆ ಊಟ, 3 ರೂ. ಗೆ ಕಾಫಿ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಇಂದಿರಾ ಕ್ಯಾಂಟೀನ್ಗೆ ಸೆಡ್ಡು ಹೊಡೆಯಲು ಇದೀಗ ಜೆಡಿಎಸ್ ಮುಖಂಡ ಶಾಸಕ ಟಿ ಎ ಶರವಣ ಅಪ್ಪಾಜಿ ಕ್ಯಾಂಟೀನ್ಆರಂಭಿಸಿದ್ದಾರೆ.
ಶರವಣ ನಿರ್ಮಿಸಿರುವ ಅಪ್ಪಾಜಿ ಕ್ಯಾಂಟಿನ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. 10 ರೂಪಾಯಿಗೆ ಮುದ್ದೆ ಊಟ ಅನ್ನ ಸಾಂಬಾರ್, 5 ರೂಪಾಯಿಗೆ ಇಡ್ಲಿ ಕೇಸರಿಬಾತ್ ನೀಡುವ 'ದೇವೇಗೌಡ ನಮ್ಮ ಅಪ್ಪಾಜಿ ಕ್ಯಾಂಟೀನ್' ಇಂದು ಉದ್ಘಾಟನೆಗೊಳ್ಳಲಿದೆ
ಶ್ರೀ ಸಾಯಿ ಸಮರ್ಪಣ ಚಾರಿಟೇಬಲ್ ನಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಗೊಳ್ಳಲಿದೆ.
ಅಪ್ಪಾಜಿ ಕ್ಯಾಂಟೀನ್'ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, 10 ರೂ.ಗೆ ಪೊಂಗಲ್, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್ ಬಾತ್,3 ರೂ.ಗೆ ಕಾಫಿ-ಟೀ ನೀಡಲಾಗುವುದು.ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ.
10 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣ ಆಗಿದ್ದು, ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
Comments