ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಶಾಸಕರು ಜೆಡಿಎಸ್ ತೆಕ್ಕೆಗೆ: ಎಚ್ ವಿಶ್ವನಾಥ್
ಬಳ್ಳಾರಿ:ಮುಂಬರುವ ದೀಪಾವಳಿ ಹಬ್ಬದ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆರಂಭವಾಗಲಿದೆ. ಕಾಂಗ್ರೆಸ್ನಿಂದ ಬೇಸತ್ತಿರುವ ಶಾಸಕರು, ಮುಖಂಡರು, ಅದೇ ರೀತಿ ಬಿಜೆಪಿಯಿಂದಲೂ ಜಿಡಿಎಸ್ಗೆ ಕೆಲವರು ಸೇರಲಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಂಸದ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ನೀರಾವರಿ ಮೊದಲಾದ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತ ನೋಡಿ ಬೇಸತ್ತಿರುವ ಜನತೆ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಲು ಮುಂದಾಗುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಶಾಸಕರು ಮುಖಂಡರು ಜೆಡಿಎಸ್ಗೆ ಬರಲಿದ್ದಾರೆಂದರು.ಹಾಲುಮತ ಸಮಾಜದವರು ಇತರೇ ದಲಿತ ಸಮಾಜದಿಂದ ದಾಖಲಿಸುತ್ತಿರುವ ಅಟ್ರಾಸಿಟಿ ಕೇಸುಗಳಿಂದ ತಪ್ಪಿಸಿಕೊಳ್ಳಲು ಎಸ್ಟಿ ವರ್ಗಕ್ಕೆಸೇರಲು ಬೇಡಿಕೆ ಇಟ್ಟಿದ್ದಾರೆ. 1994 ರಲ್ಲೇ ಬಳ್ಳಾರಿಯಲ್ಲಿಆನಂತರ ದಾವಣಗೆರೆ, ಮೈಸೂರು ಮೊದಲಾದ ಕಡೆಗಳಲ್ಲಿ ನಡೆದ ಸಭೆಯಲ್ಲಿ ನಾನು ಮುಖ್ಯಮಂತ್ರಿಯಾದರೆ ಹಾಲುಮತವನ್ನು ಎಸ್‌ಟಿವರ್ಗಕ್ಕೆ ಸೇರಿಸುತ್ತೇನೆ ಎಂದಿದ್ದರು. ಈಗ ಆಗಿದ್ದಾರೆ ಮಾಡಲಿ ಎಂದು ಕುಟುಕಿದರು.ಚುನಾವಣಾ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಎಂದು ಸಿದ್ದರಾಮಯ್ಯ ಭೇದದ ವಿಷ ಬೀಜ ಬಿತ್ತಿ ಸಮಾಜದಲ್ಲಿ ಶಾಂತಿಯನ್ನು ಕದಡುವುದು ಸರಿಯಲ್ಲವೆಂದರು.ಅಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿರುವವರನ್ನು ಬಂಧಿಸಿ ಲೂಟಿ ಮಾಡಿದ್ದನ್ನು ವಸೂಲಿ ಮಾಡುವುದಾಗಿ ಹೇಳಿದ್ದಿರಿ. ಈಗ ಬಳ್ಳಾರಿಗೆ ಬಂದು ಉತ್ತರಿಸಿ ಎಂದು ಸಿಎಂ ಗೆ ವಿಶ್ವನಾಥ್ ಸವಾಲು ಹಾಕಿದರು.ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಕಬ್ಬಿಣದ ಶಿವಪ್ಪ, ಮಾಜಿ ಶಾಸಕ ಹೆಚ್.ಡಿ, ಬಸವರಾಜ್, ಮುಖಂಡರುಗಳಾದ ಮೀನಳ್ಳಿ ತಾಯಣ್ಣ, ಹೇಮಯ್ಯಸ್ವಾಮಿ, ಕಿರಣ್ ಮೊದಲಾದವರು ಇದ್ದರು.
Comments