ಬಂಡಾಯ ಶಾಸಕರ ಮಣಿಸಲು JDS ನಾಯಕರ ಪ್ಲಾನ್

31 Jul 2017 12:16 PM |
5869 Report

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಅಮಾನತುಗೊಂಡಿರುವ 7 ಶಾಸಕರ ಮಣಿಸಲು ಜೆ.ಡಿ.ಎಸ್. ನಾಯಕರು ಪ್ಲಾನ್ ಮಾಡಿದ್ದಾರೆ. ಭಿನ್ನಮತೀಯರ ಕ್ಷೇತ್ರದಲ್ಲಿ ಸರಣಿ ಸಮಾವೇಶಗಳನ್ನು ನಡೆಸುವ ಮೂಲಕ, ಪಕ್ಷಕ್ಕೆ ಮಾಡಿದ ದ್ರೋಹವನ್ನು ಅವರದೇ ಕ್ಷೇತ್ರದ ಜನರಿಗೆ ತಿಳಿಸಲು ಯೋಜಿಸಲಾಗಿದೆ.

ಆಗಸ್ಟ್ 2 ನೇ ವಾರದಿಂದ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಮಾವೇಶ ನಡೆಸಲಿದ್ದಾರೆ.

ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಸೇರಿದಂತೆ 7 ಮಂದಿ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿ ಪಕ್ಷ ಸಂಘಟನೆ ಮಾಡಲಾಗುವುದು.

ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಪ್ಲಾನ್ ಮಾಡಿರುವ ಜೆ.ಡಿ.ಎಸ್. ನಾಯಕರು ಆಗಸ್ಟ್ ನಲ್ಲಿ ಸರಣಿ ಸಮಾವೇಶ ನಡೆಸಲಿದ್ದಾರೆ ಎನ್ನಲಾಗಿದೆ.

Edited By

jds admin

Reported By

jds admin

Comments