ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆ ಖಚಿತ: ಕೆಪಿಸಿಸಿ ಸದಸ್ಯ ಎ.ಮಂಜು
ಇಲ್ಲಿಗೆ ಸಮೀಪದ ಸೋಲೂರು ಸರಕಾರಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನನ್ನ ಸ್ವಂತಹಣ, ದುಡಿಮೆಯ ಬಂಡವಾಳವನ್ನು ಎಚ್.ಎಂ.ರೇವಣ್ಣ ಕ್ಷೇತ್ರ ತೊರೆದಾಗ ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದ ಜಿಲ್ಲಾಉಸ್ತುವಾರಿ ಸಚಿವ ಡಿ ಕೆ.ಶಿವಕುಮಾರ್ ಕಳುಹಿಸಿ ಈಗ ಜೆಡಿಎಸ್ನಿಂದ ಉಚ್ಛಾಟಿತ ಬಾಲಕೃಷ್ಣರಿಗೆ ಟಿಕೇಟು ಕೊಡುವುದಾಗಿ ಆಹ್ವಾನಿಸಿ ನನಗೆ ಮೋಸಮಾಡಿದ ಕಾರಣ ವಿಧ
ಈ ಹಿಂದೆಯೂ ನಾನು ಕಾಂಗ್ರೆಸ್ ಕಚೇರಿಯನ್ನು ಸ್ಥಾಪಿಸುವಾಗ ಸಂಸದ ಡಿಕೆ ಸುರೇಶ್,ಎಂಎಲ್‍ಸಿ ರವಿಯವರನ್ನು ಕೇಳಿ ಭವ್ಯವಾದ ಕಟ್ಟಡವನ್ನು ನಿರ್ಮಿಸಿದೆ.ಅಲ್ಲಿಗೆ ಡಿಕೆಶಿ ಸೇರಿದಂತೆ ಅನೇಕ ಸಚಿವರು ಪಕ್ಷದ ಹಿರಿಯ ಮುಖಂಡರು ಬಂದು ಹೋಗಿದ್ದರು. ಮುಂದಿನ ಎಂಎಲ್‍ಎ ನೀವೇ ಆದರೆ ಮಾತ್ರ ಪಕ್ಷಕ್ಕೆ ಗೌರವ ಬೆಲೆ ಎಂದು ಹಾಡಿ ಹೊಗಳಿ ಹೋಗಿದ್ದರು.
ಇಂದಿಗೂ ಪಕ್ಷ ಸಂಘಟನೆಯ ಮೂಲಕ ಮಾಗಡಿ ವಿಧಾನ ಸಭಾಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು,ಮುಖಂಡರುಗಳ ಪರಿಚಯವಾಯಿತು.ಇ0ದಿಗೂ ಅವರ ಅಭಿಮಾನದ ಕುರುಹಾಗಿ ನಾಯಕನಾಗಿ ಉಳಿದಿರುವೆ. ಅವರ ಮಾರ್ಗದರ್ಶನ ಸಲಹೆಗಳು ನನಗೆ ಮುಖ್ಯ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಎದುರಿಸುವ ಶಕ್ತಿಯುಳ್ಳ ಮುಖಂಡರಿಗೆ ಕೊರತೆಯಿಲ್ಲ. ಜೆಡಿಎಸ್‍ನಿಂದ ಎರವಲು ಪಡೆದು ಗೆಲ್ಲುವ ಅವಶ್ಯಕತೆಯಿಲ್ಲ.ಈಗ ಬಾಲಕೃಷ್ಣ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಿಲ್ಲವೆಂದು ಉಚ್ಛಾಟಿಸಿಕೊಂಡು ಹೊರಬಂದವರನ್ನು ಕಾಂಗ್ರೆಸ್ ಯಾವ ಆಧಾರದ ಮೇಲೆ ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟು ಕೊಡಲು ಮುಂದಾಗಿದೆ ಎಂಬುದರ ಬಗ್ಗೆ ಡಿಕೆಶಿಯವರ ಬಳಿ ಪ್ರಸ್ತಾಪಿಸಿದಾಗ “ನಾನು ಈಗ ಅಸಹಾಯಕ ಟಿಕೇಟು ಕೊಡುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟದ್ದು”ಎಂದು ಕೈಚೆಲ್ಲುವಾಗ ನಾನು ತಾನೆ ಏನುಮಾಡಬೇಕು.ನನ್ನ ನಂಬಿದ ಕಾರ್ಯಕರ್ತರನ್ನು ಅವರು ನನ್ನನ್ನು ನಡುನೀರಿನಲ್ಲಿ ಕೈಬಿಟ್ಟಂತೆ ನಾನು ಬಿಡಲು ಸಾದ್ಯವಿಲ್ಲ ಎಂದು ತನ್ನ ನಾಯಕತ್ವದ ಗುಣಗಳನ್ನು ಸಮರ್ಥಿಸಿಕೊಂಡರು.
Comments