ರಮನಾಥ ರೈ ಹೆಸರಿಗಷ್ಟೇ ಹೋಂ ಮಿನಿಸ್ಟರ್ ಕೆಲಸಕ್ಕೆ..

ಒಂದು ವೇಳೆ ಅರಣ್ಯ ಸಚಿವ ರಮಾನಾಥ್ ರೈ ಅವರು ಗೃಹ ಮಂತ್ರಿಯಾದರೆ ಅವರು ಹೆಸರಿಗಷ್ಟೇ ಗೃಹಮಂತ್ರಿ ಎನ್ನಬಹುದು. ಆಸಲಿಗೆ ನಿಜವಾದ ಗೃಹಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಹಾಯಕರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರೇ ಆಗಿರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಂಪಯ್ಯನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏತಕ್ಕಾಗಿ
ಕರಾವಳಿ ಭಾಗದಲ್ಲಿ ಇತ್ತೀಚಿಗೆ ನಡೆದ ಗಲಭೆ ಕುರಿತಂತೆ ಪ್ರಸ್ತಾಪಿಸಿದ ಅವರು ಈ ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರ ನಡೆಸುತ್ತಿವೆ. ರಮಾನಾಥ ರೈ ಅವರು ನಾಮಕಾವಸ್ತೆಗೆ ಗೃಹಸಚಿವರು ಆಗುವ ಸಾಧ್ಯತೆಗಳಿವೆ ಎಂದು ವ್ಯಂಗ್ಯವಾಡಿದರು. ಎರಡು ರಾಷ್ಟ್ರೀಯ ಪಕ್ಷಗಳು ಧರ್ಮ ಸಾಮರಶ್ಯೆಕ್ಕೆ ಆದ್ಯತೆ ನೀಡುತ್ತಿಲ್ಲ . ಗಲಭೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.
Comments