ರಾಜಧಾನಿಯಲ್ಲಿ ಹೆಚ್ಚು ಸ್ಥಾನ ಗಳಿಸಲು ಜೆಡಿಎಸ್ ರಣತಂತ್ರ!
ರಾಜ್ಯದಲ್ಲಿ ಪಕ್ಷವನ್ನು ಅಧಿಕಾರ ತರುವ ಗುರಿ ಸಾಧನೆಗಾಗಿ ಬೆಂಗಳೂರಿನಲ್ಲೂ ಹೆಚ್ಚು ಸ್ಥಾನಗೆಲ್ಲುವ ಅನಿವಾರ್ಯತೆಗಾಗಿ ಖುದ್ದುರಣತಂತ್ರ ರೂಪಿಸುತಿರುವ ಎಚ್ ಡಿ ದೇವೇಗೌಡರು , ಮುಂದಿನ ಎರಡು ತಿಂಗಳು ಕ್ಷೇತ್ರವಾರು ಸರಣಿ ಸಮಾವೇಶಗಳನ್ನು ನೆಡಸುತಿದ್ದಾರೆ.ಪಕ್ಷ ಗೆಲ್ಲುವ ಅವಕಾಶ ಹೆಚ್ಚಿರುವ 10 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿ ಸರಣಿ ಸಮಾವೇಶ ಮೂಲಕ ಚುನಾವಣಾ ತಯಾರಿಗೆಖುದ್ದು ದೇವೇಗೌಡರು ಉಸ್ತುವಾರಿ ವಹಿಸಿದ್ದಾರೆ. ಯಶವಂತಪುರ , ಚಾಮರಾಜಪೇಟೆ, ಗಾಂಧಿನಗರ , ಪುಲಕೇಶಿನಗರ , ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರಗಳ ಮೇಲೆ ವಿಶೇಷ ಆಸಕ್ತಿ ವಹಿಸಿದ್ದಾರೆ .
Comments