ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಮತ್ತೊಂದು ಭಾಗ್ಯ
ಕರ್ನಾಟಕ ರಾಜ್ಯ ಸರಕಾರವೂ ರಾಜ್ಯದಲ್ಲಿರುವ ಸುಮಾರು 10ಲಕ್ಷ ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯನ್ನು ಆರಂಭಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸುದ್ದಿಗ್ಠೋಯಲ್ಲಿ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ,ಸಿಲಿಂಡರ್,ಸ್ಟೌವ ಒಳಗೊಂಡ 3000 ರೂಗಳ ಪ್ಯಾಕೇಜ್‍ನ್ನು ನೀಡುತ್ತಿದ್ದು,ಇದಕ್ಕಾಗಿ 300 ಕೋಟಿ ರೂಗಳನ್ನು ಮೀಸಲಿರಿಸಲು ಸಹ ಮುಂದಾಗಿದೆ ಎಂದರು.
ಕೇಂದ್ರದ ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸಂಪರ್ಕ ನೀಡಿ, ಸಾಲದ ಬಾಂಡ್ ನೀಡಿ,ಕುಟುಂಬಕ್ಕೆ ಸರಕಾರ ನೀಡುವ ಸಬ್ಸಿಡಿ ಹಣವನ್ನು ಸಾಲಕ್ಕೆ ಕಡಿತ ಮಾಡಿಕೊಳ್ಳಲಾಗುತ್ತಿದೆ.ಆದರೆ ಮುಖ್ಯಮಂತ್ರಿಗಳ ಅನಿಲ ಅನಿಲ ಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳ ಮೇಲೆ ಯಾವುದೇ ಸಾಲ ಹೊರಿಸದೆ, ಸರಕಾರ ಇಡೀ ಸಂಪರ್ಕಕ್ಕೆ ತಗಲುವ 3000 ರೂ ಖರ್ಚನ್ನು ಭರಿಸಿ, ಸಂಪೂರ್ಣವಾಗಿ ಉಚಿತವಾಗಿ ಗ್ಯಾಸ್ ಸಂಪರ್ಕ ತರಿಸಲಾಗುತ್ತಿದೆ.ಶೀಘ್ರದಲ್ಲಿಯೇ ಈ ಬಗ್ಗೆ ಸರಕಾರಿ ಆದೇಶ ಹೊರಬಿಳಲಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
Comments