ಜಮೀರ್ ವಿರುದ್ಧ ತೊಡೆತಟ್ಟಿ ನಿಂತ್ರ ಎಚ್ಡಿ ದೇವೇಗೌಡರು …!
ಬೆಂಗಳೂರು: ದೇವೇಗೌಡರ ವಿರುದ್ಧ ಜಮೀರ್ ಅಹಮದ್ ಹಾಕಿದ್ದ ಸವಾಲನ್ನು ಗಂಭೀರವಾಗಿ ಪರಗಣಿಸಿರುವ ದೇವೇಗೌಡರು ಚಾಮರಾಜಪೇಟೆಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಂತಿದೆ.
ಇತ್ತೀಚೆಗೆ ಜೆಡಿಎಸ್ ಸಮಾವೇಶ ಮಾಡಿದ್ದಕ್ಕೆ ವ್ಯಂಗ್ಯವಾಡಿದ್ದ ಜಮೀರ್ ಅಹಮದ್ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಉಳಿಸಿಕೊಂಡರೆ ತನ್ನ ತಲೆ ಕತ್ತರಿಸಿ ಕೊಡುವುದಾಗಿ ಮಾಧ್ಯಮದಮುಂದೆ ಜೆಡಿಎಸ್ಗೆ ಸವಾಲು ಹಾಕಿದ್ದರು.
ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ದೇವೇಗೌಡರು ಇಂದು ಮತ್ತೊಂದು ಸಮಾವೇಶವನ್ನು ಚಾಮರಾಜ ಪೇಟೆಯಲ್ಲಿ ಮಾಡುತಿದ್ದು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಸಮಾವೇಶವಾಗಿದೆ.
ಜಮೀರ್ ಅಹಮದ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ದೇವೇಗೌಡರು ಈ ಕ್ಷೇತ್ರದಲ್ಲಿ ಶತಾಯ ಗತಾಯ ಜೆಡಿಎಸ್ಅನ್ನು ಗೆಲ್ಲಿಸಿ ಬಂಡಾಯ ಶಾಸಕರಿಗೆ ತಕ್ಕ ಉತ್ತರ ನೀಡಬೇಕೆಂದು ನಿರ್ಧರಿಸದಂತಿದೆ.
Comments