ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ತಾಕತ್ತಿಲ್ಲ : ಹೆಚ್.ವಿಶ್ವನಾಥ್ ಲೇವಡಿ

ಬಿಜೆಪಿ ಹಾಗೂ ಕಾಂಗ್ರೆಸ್ ದೆಹಲಿಯ ಹಿಂದಿ ಜನರ ಅಧೀನದಲ್ಲಿವೆ. 2 ರಾಷ್ಟ್ರೀಯ ಪಕ್ಷಗಳಿಗೂ ಸ್ವತಂತ್ರ ನಿರ್ಧಾರ ಕೈಗೊಳ್ಳುವ ತಾಕತ್ತಿಲ್ಲ ಎಂದು ಮಾಜಿ ಸಂಸದ, ಜೆಡಿಎಸ್ ನಾಯಕ ಹೆಚ್.ವಿಶ್ವನಾಥ್ ಲೇವಡಿಯಾಡಿದ್ದಾರೆ.
ಕೊಡಗಿನಲ್ಲಿ ಮಾತನಾಡಿದ ಅವರು ಎರಡು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನರು ಸ್ಥಳೀಯ ಹಾಗೂ ಪ್ರಾಂತೀಯ ಪಕ್ಷದತ್ತ ಮುಖ ಮಾಡಿದ್ದಾರೆ. ಕುಮಾರಸ್ವಾಮಿ ಅವರ ನಾಯಕತ್ವದ ಕುಮಾರ ಪಥದಲ್ಲಿ ಸಾಗಲು ನಾನು ಸಿದ್ಧನಿದ್ದೇನೆ. ಈ ನೆಲದ ನದಿ ಮರಳನ್ನು ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ನಾಟಕ ಆಡುತ್ತಿದೆ ಮುಖ್ಯ ಮಂತ್ರಿಗಳು ಭ್ರಷ್ಟಾಚಾರವನ್ನು ಹೊದ್ದು ಮಲಗಿದ್ದಾರೆ, ಅವರ ವಚನಗಳು ಹುಸಿಯಾಗಿದೆ. ಕೇಂದ್ರ ಸರ್ಕಾರದಲ್ಲಿ ಎಲ್ಲವೂ ಗೊಂದಲಮಯ, ಆರ್ಥಿಕ ನೀತಿಯೇ ಬುಡಮೇಲಾಗಿದೆ. ಕೇಂದ್ರ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ 2 ರಾಷ್ಟ್ರೀಯ ಪಕ್ಷಗಳು ವೈಫಲ್ಯವಾಗಿದೆ,ರಾಜ್ಯ ಕಾಂಗ್ರೆಸ್ ಸರ್ಕಾರ ಕೆರೆಗಳನ್ನು ಮಾರಿಕೊಳ್ಳುತ್ತಿದೆ. ಇವೆರಡೂ ದೆಹಲಿಯಿಂದ ದರ್ಬಾರ್ ಮಾಡುವ ಸರ್ಕಾರಗಳು ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕಕಕ್ಕೆ ನಾಡು ನುಡಿ, ನೆಲ ಜಲದ ಸಂರಕ್ಷಣೆಗೆ ಪ್ರಾಂತೀಯ ಪಕ್ಷದ ಅನಿವಾರ್ಯತೆ ಇದೆ. ಮುಖ್ಯ ಮಂತ್ರಿಗಳ ಮೇಲೆ ಬಹಳ ಅಭಿಮಾನ ಇತ್ತು, ಅದು ಈಗ ಇಲ್ಲ. ಮಣ್ಣಿನ ಮಗ ಈ ನೆಲದ ನಾಯಕನಿಗೆ ಹೊಸತನದ ಯುಗದ ಆರಂಭ ಮಾಡುವ ಸಾಮರ್ಥ್ಯ ಇದೆ. ಯುವ ನಾಯಕ ಕುಮಾರ ಸ್ವಾಮಿ ಅವರಿಗೆ ಬೆಂಬಲ ನೀಡಿ. ನಾಳೆಯಿಂದ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಭೇಟಿ ನೀಡಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸುತ್ತೇನೆ.
Comments