ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ದೊಡ್ಡ ಗೌಡರು ಪ್ಲಾನ್!
ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ಗೆ ಸೆಡ್ಡು ಹೊಡೆದಿರುವ ರೆಬೆಲ್ ನಾಯಕರನ್ನು ಸೋಲಿಸಲೇಬೇಕೆಂದು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಹೀಗಾಗಿ 7 ಕ್ಷೇತ್ರಗಳ ಗ್ರೌಂಡ್ ರಿಪೋರ್ಟ್ ತರಿಸಿಕೊಂಡಿರುವ ಜೆಡಿಎಸ್ ವರಿಷ್ಠರು, ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಗೇಮ್ ಪ್ಲಾನ್ ಮಾಡಿದ್ದಾರೆ.
ಅಲ್ಲದೇ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ರೆಬೆಲ್ ನಾಯಕರನ್ನ ಸೋಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಅಲ್ಪ ಸಂಖ್ಯಾತ ಹಾಗೂ ಒಂದು ಕಾಲದಲ್ಲಿ ಜಮೀರ್'ಗೆ ಆಪ್ತನಾಗಿದ್ದವರನ್ನೇ ಕಣಕ್ಕಿಳಿಸಲು ಗೌಡರು ಪ್ಲಾನ್ ಮಾಡಿದ್ದಾರೆ.
ಇನ್ನು ಮಾಗಡಿ ಕ್ಷೇತ್ರಕ್ಕೆ ಎ.ಮಂಜು ಹಾಗೂ 2008 ರ ಮಾದರಿಯಲ್ಲೇ ಇಕ್ಬಾಲ್ ಅನ್ಸಾರಿಯನ್ನ ಸೋಲಿಸಲು ದೊಡ್ಡ ಗೌಡರು ಪ್ಲಾನ್ ಮಾಡಿಕೊಂಡಿದ್ದಾರೆ.
Comments