ಜೆಡಿಎಸ್ ನಿಂದ ಮತ್ತೊಂದು ವಿಕೆಟ್ಗೆ ಗಾಳ... ಮಧುಬಂಗಾರಪ್ಪ ಹೇಳಿದ್ದೇನು!?
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ ಅವರಿಗೆ ಜೆಡಿಎಸ್ ಗಾಳ ಹಾಕಿದಂತಿದೆ. ಇಂತಹ ಸುಳಿವನ್ನು ಜೆಡಿಎಸ್ನ ರಾಜ್ಯ ಯುವ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಪರೋಕ್ಷವಾಗಿ ನೀಡಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಒಂದು ವರ್ಷದಿಂದ ಮಾಜಿ ಸಚಿವ ವಿಶ್ವನಾಥ್ ಅವರನ್ನು ಪಕ್ಷಕ್ಕೆ ಕರೆ ತರುವ ಕೆಲಸ ಮಾಡಿದ್ದೆ. ಈ ರೀತಿಯ ಆಪರೇಷನ್ ಎಂದರೆ ನನಗೆ ಆಸಕ್ತಿ. ಆದರೆ, ಅದಕ್ಕೆ ಅಂತಿಮ ಅನುಮತಿ ಗೌಡರಿಂದಲೇ ಸಿಗಬೇಕು. ಜನತಾ ಪರಿವಾರದ ಮುಖಂಡರೆಲ್ಲ ಒಂದಾಗಬೇಕು ಎಂಬುದು ನನ್ನ ಆಶಯ. ರಾಜಕಾರಣದಿಂದ ದೂರ ಉಳಿದಿರುವ ಎಂ.ಸಿ.ನಾಣಯ್ಯ, ಪಿ.ಜಿ.ಆರ್.ಸಿಂಧ್ಯಾ ಮೊದಲಾದವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದರು.
ದೇವೇಗೌಡರು ಹೇಳಿರುವುಂತೆ ಕೆಲವರನ್ನು ಬಿಟ್ಟು ಬೇರೆ ಪಕ್ಷದಲ್ಲಿರುವವರು ನಮ್ಮ ಪಕ್ಷಕ್ಕೆ ಬರುವುದಾರೆ ಸ್ವಾಗತ. ಕಾಂಗ್ರೆಸ್ ಹೇಳಿದ್ದನ್ನು ಮಾಡುವುದಿಲ್ಲ. ಎಂ.ಪಿ.ರವೀಂದ್ರ ಈಗಲಾದರೂ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡದಿರುವ ಬಗ್ಗೆ ಅರಿತುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಸ್ನೇಹಿತನಾಗಿ ಹೇಳುವೆ ಎನ್ನುವ ಮೂಲಕ ಅವರನ್ನು ಪಕ್ಷಕ್ಕೆ ಕರೆತರುವ ಯತ್ನ ನಡೆಸಿರುವುದನ್ನು ಸೂಚ್ಯವಾಗಿ ಹೇಳಿದರು
Comments