ಬಿ.ಜೆ.ಪಿ. ಕಾರ್ಯಕರ್ತರಿಗೆ ಬೈಕ್ ಭಾಗ್ಯ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿ, ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಈಗಾಗಲೇ ಬಿ.ಜೆ.ಪಿ. ಕಾರ್ಯೋನ್ಮುಖವಾಗಿದೆ.
ಜನಸಂಪರ್ಕ ಅಭಿಯಾನದ ಬಳಿಕ, ವಿಸ್ತಾರಕ್ ಕಾರ್ಯಕ್ರಮ ಕೈಗೊಂಡಿದೆ. ವಿಸ್ತಾರಕ್ ಕಾರ್ಯಕ್ರಮದಲ್ಲಿ ಭಾಗಿಯಾದ ಆಯ್ದ ಕಾರ್ಯಕರ್ತರಿಗೆ ಬಿ.ಜೆ.ಪಿ.ಯಿಂದ ಬೈಕ್ ನೀಡಲಿದ್ದು, ಇವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಳಕೆಯಾದ ಸುಮಾರು 50 ಬೈಕ್ ಗಳನ್ನು ತರಲಾಗಿದ್ದು, ಆಗಸ್ಟ್ ಮೊದಲ ವಾರ ವಿಸ್ತಾರಕ್ ಕಾರ್ಯಕರ್ತರಿಗೆ ನೀಡಲಾಗುವುದು. ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದ್ದು, ಈ ಬೈಕ್ ಗಳ ಕೀ ಹಸ್ತಾಂತರಿಸಲಿದ್ದಾರೆ. ಈ ಬೈಕ್ ಬಳಸಿಕೊಂಡು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.
Comments