ಬಂಡಾಯ ಶಾಸಕರಿಗೆ ಎಚ್.ಡಿ.ರೇವಣ್ಣ ಸವಾಲ್
‘ಜೆಡಿಎಸ್ ನ ಏಳು ಬಂಡಾಯ ಶಾಸಕರಿಗೆ ನೈತಿಕತೆ ಇದ್ದರೆ ನಾಳೆಯೇ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲಿ’ ಎಂದು ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಸವಾಲು ಹಾಕಿದರು.
‘ಜೆಡಿಎಸ್ ಚಿಹ್ನೆಯಡಿ ಶಾಸಕರು ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು. ಈಗಲೇ ರಾಜೀನಾಮೆ ನೀಡಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಸೇರಿಕೊಳ್ಳಲಿ. ಜಮೀರ್ ಅಹ್ಮದ್ ರುಂಡ ತೆಗೆದುಕೊಂಡು ನಾವೇನು ಮಾಡಬೇಕು’ ಎಂದು ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಮಹಾಮೈತ್ರಿ ಅಗತ್ಯವಿಲ್ಲ ಎಂಬ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ, ಮೈತ್ರಿ ಮಾಡಿಕೊಳ್ಳುವಂತೆ ಜೆಡಿಎಸ್ ಅರ್ಜಿ ಹಾಕಿಲ್ಲ.
ಪಕ್ಷದಲ್ಲಿ ಸಾಕಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ನಮ್ಮ ಬಸ್‌ಗಳು ಭರ್ತಿ ಆಗಿವೆ. ಕಾಂಗ್ರೆಸ್‌ನಲ್ಲಿ ಚಾಲಕನ ಸ್ಥಾನ ಖಾಲಿ ಇರುವುದರಿಂದ ಜಮೀರ್ ಅವರನ್ನು ಕರೆಸಿಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
Comments