ಬಿಜೆಪಿಯಿಂದ ಬೃಹತ್ ಸಾಮಾಜಿಕ ಮಾಧ್ಯಮ ಸಮಾವೇಶ

25 Jul 2017 10:27 AM |
1089 Report

ಬೆಂಗಳೂರು: ಆಗಸ್ಟ್ 6ರಂದು ಭಾರತೀಯ ಜನತಾ ಪಾರ್ಟಿ ಬೃಹತ್ ಸಾಮಾಜಿಕ ಮಾಧ್ಯಮ ಸಮಾಲೋಚನೆ ನಡೆಸಲು ಮುಂದಾಗಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಮತದಾರರನ್ನು ಸೆಳೆಯುವ ಕಾರ್ಯತಂತ್ರವಾಗಿ ಈ ಸಾಮಾಜಿಕ ಮಾಧ್ಯಮ ಸಮಾಲೋಚನೆ ಬೆಂಗಳೂರಿನಲ್ಲಿ ನಡೆಯಲಿದೆ.

ಪಕ್ಷದ ಸಾಮಾಜಿಕ ಮಾಧ್ಯಮ ಘಟಕ ಈಗಾಗಲೇ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ಮಾಧ್ಯಮ ತಂಡವನ್ನು ನೇಮಿಸುವ ಕಾರ್ಯದಲ್ಲಿ ತೊಡಗಿದೆ. ಪ್ರತಿ ತಂಡದಲ್ಲಿ ಕನಿಷ್ಠ 20 ಮಂದಿ ಸದಸ್ಯರಿರುತ್ತಾರೆ. ಅದಕ್ಕೆ ಹೊರತಾಗಿ ಪಕ್ಷಕ್ಕೆ ಉತ್ಸಾಹಿ ಯುವಕ, ಯುವತಿಯರ ಹೆಸರುಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. 

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ, ಜಿಲ್ಲಾ ಬಿಜೆಪಿ ಸಾಮಾಜಿಕ ಘಟಕದ ಸಂಚಾಲಕ, ಬಾಲಾಜಿ ಶ್ರೀನಿವಾಸ್, ಬಿಜೆಪಿಯ ಸಾಮಾಜಿಕ ಮಾಧ್ಯಮದ ಸಕ್ರಿಯ ಕಾರ್ಯಕರ್ತರ ಬೃಹತ್ ಮೇಳವನ್ನು ಆಯೋಜಿಸಲಿದ್ದು, ಆಗಸ್ಟ್ 6ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಇಲ್ಲಿಯವರೆಗೆ 12,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೆಸರು ದಾಖಲು ಮಾಡಿಕೊಂಡಿದ್ದಾರೆ. ಸುಮಾರು 6,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

 

Edited By

Admin bjp

Reported By

Admin bjp

Comments