ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಸಿಂಧನೂರಿನಿಂದ ಐದು ದಿನಗಳ ಕಾಂಗ್ರೆಸ್ ಪಾದಯಾತ್ರೆ

25 Jul 2017 10:08 AM |
1324 Report

ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಯುವ ಕಾಂಗ್ರೆಸ್ ಜು.31ರಿಂದ ಸಿಂಧನೂರಿನಿಂದ ರಾಯಚೂರಿಗೆ 5 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ತಿಳಿಸಿದರು.

ರೈತರ ಮೇಲಿನ ಋಣಭಾರ ಕಡಿಮೆಯಾಗಬೇಕಾದರೆ ಕೇಂದ್ರ ಸರ್ಕಾರವೂ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಆದರೆ ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಜು.31ರಂದು ಸಿಂಧನೂರಿನಲ್ಲಿ ಬೃಹತ್‌ ಸಮಾವೇಶ ಮಾಡಿ, ರಾಯಚೂರುವರೆಗೆ ಪಾದಯಾತ್ರೆ ನಡೆಸಲಾಗುವುದು. ಪಾದಯಾತ್ರೆಗೆ ಚಿತ್ರನಟ ಯಶ್‌ ಚಾಲನೆ ನೀಡಲಿದ್ದಾರೆ.

ಪಾದಯಾತ್ರೆ ಆ.4ರಂದು ರಾಯಚೂರು ತಲುಪಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಇತರರುರಾಯಚೂರು 10 ಕಿ.ಮೀ. ದೂರವಿದ್ದಾಗ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಆ.4ರಂದು ಬೃಹತ್‌ ಸಮಾವೇಶ ನಡೆಸಿ ಪಾದಯಾತ್ರೆಯನ್ನು ಮುಗಿಸಲಾಗುವುದು ಎಂದು ಹೇಳಿದರು.

Edited By

congress admin

Reported By

congress admin

Comments