ಮಧುಬಂಗಾರಪ್ಪ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪರ ತಿರುಗೇಟು
ಶಿವಮೊಗ್ಗ :'ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿಯಾಗಿದ್ದರು' ಎಂದು ಲೇವಡಿ ಮಾಡಿದ್ದ ಜೆಡಿಎಸ್ ಶಾಸಕ, ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶನಿವಾರ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ 'ಮಧು ಬಂಗಾರಪ್ಪ ಹೇಳಿಕೆ ರಾಜಕೀಯ ಸೇಡಿಗೆ ಸೀಮಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಅಭಿವೃದ್ಧಿಯಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮಧುಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಹಗುರವಾದ ಹೇಳಿಕೆ ಅವರ ಯೋಗ್ಯತೆ ತೋರಿಸುತ್ತದೆ' ಎಂದರು.
ನವಲಗುಂದ ರೈತ ಸಮಾವೇಶದಲ್ಲಿ ಮಾತನಾಡಿದ್ದ ಮಧು ಬಂಗಾರಪ್ಪ 'ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿಯಾಗಿದ್ದರು.ಅವರ ರಕ್ತ ರೈತ ವಿರೋಧಿ. ಅವರು ಪ್ರಧಾನಿ ನರೇಂದ್ರ ಮೋದಿಯವರ ಮೂಗು ಹಿಡಿದು ರಾಜ್ಯದ ರೈತರ ಸಾಲ ಮನ್ನಾ ಮಾಡಲಿ' ಎಂದು ವಾಗ್ದಾಳಿ ನಡೆಸಿದ್ದರು.
Comments