ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ದಾಖಲೆ..!
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಐದು ಮಂದಿ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಬದಲಾವಣೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಎಂ.ಎನ್.ರೆಡ್ಡಿ ವರ್ಗಾವಣೆಯಿಂದ ಹಿಡಿದು ನಾಲ್ಕು ವರ್ಷಗಳಲ್ಲಿ ಬರೊಬ್ಬರಿ ಐದು ಮಂದಿಯನ್ನು ಈ ವಿಭಾಗದಿಂದ ಎತ್ತಂಗಡಿ ಮಾಡಿ ಇತಿಹಾಸ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಒಬ್ಬ ಮುಖ್ಯಮಂತ್ರಿ ನ
ಸಾಮಾನ್ಯವಾಗಿ ರಾಜ್ಯದ ಪ್ರತಿಯೊಂದು ಮಾಹಿತಿಗಳು, ಆಗು- ಹೋಗುಗಳ ಬಗ್ಗೆ ಗುಪ್ತಚರ ವಿಭಾಗದ ಮುಖ್ಯಸ್ಥರು ಕಲೆಹಾಕಿ ಸರ್ಕಾರಕ್ಕೆ ದಿನಂಪ್ರತಿ ಮಾಹಿತಿ ನೀಡುತ್ತಾರೆ. ಮುಖ್ಯಮಂತ್ರಿಯವರು ತಮ್ಮ ಕುಟುಂಬದ ಸದಸ್ಯರ ಜತೆ ಒಂದು ದಿನ ಮಾತನಾಡದಿದ್ದರೂ ಗುಪ್ತಚರ ವಿಭಾಗದ ಮುಖ್ಯಸ್ಥರ ಜತೆ ಮಾತನಾಡದೇ ಇರುವ ದಿನಗಳೇ ಇರುವುದಿಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಗೋಪಾಲ್ ಬಿ.ಹೊಸೂರು, ಅಶಿತ್ ಮೋಹನ್ ಪ್ರಸಾದ್, ಸೌಮೇಂದ್ರಮುಖರ್ಜಿ ಮತ್ತು ಬಿ.ದಯಾನಂದ ಅವರಂತಹ ದಕ್ಷ ಅಧಿಕಾರಿಗಳನ್ನು ವಿನಾಕಾರಣ ವರ್ಗಾವಣೆ ಮಾಡಲಾಯಿತು. ಗೋಪಾಲ್ ಬಿ.ಹೊಸೂರ್ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಭಾಗಕ್ಕೆ ನೇಮಕವಾಗಿದ್ದರು. ಸಿದ್ದರಾಮಯ್ಯ ಅವರು ಬಂದ ನಂತರ ಯಾವ ಕಾರಣವಿಲ್ಲದೆ ಅವರನ್ನು ವರ್ಗಾಯಿಸಿದರು.
ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುಪ್ತಚರದ ಮುಖ್ಯಸ್ಥರಾಗಿದ್ದ ಸೌಮೇಂದ್ರಮುಖರ್ಜಿ ಮತ್ತು ಬಿ.ದಯಾನಂದ ಅವರನ್ನು ವಿನಾಕಾರಣ ತಲೆದಂಡ ಮಾಡಲಾಯಿತು. ಹೀಗೆ ಒಟ್ಟು ಐವರು ಗುಪ್ತಚರ ವಿಭಾಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸಿದ್ದರಾಮಯ್ಯ ಇತಿಹಾಸ ಬರೆದಿದ್ದಾರೆ.
Comments