’ರೈಸಿಂಗ್ ಕರ್ನಾಟಕ ೨೦೧೭’ ಕಾರ್ಯಕ್ರಮದಲ್ಲಿ ಭಾಗಿ
ಇಂದು ನಗರದ ಕ್ರೆಸೆಂಟ್ ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಹೊಸ ಪೀಳಿಗೆಯ ಫ಼ಿಟ್ನೆಸ್ ಸೆಂಟರ್ ’ಚಿಸೆಲ್’ ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ರಾಜ್ಯಪಾಲರಾದ ಶ್ರೀ ವಜೂಬಾಯಿ ವಾಲಾ, ಅಮೇರಿಕಾದ ಫ಼ಿಟ್ನೆಸ್ ತಜ್ಞ ಕೈ ಗ್ರೀನ್ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಶ್ಯಾಂಗ್ರೀಲಾ ಹೋಟೆಲ್ ನಲ್ಲಿ ಈ ಟೀವಿ ನ್ಯೂಸ್ ವಾಹಿನಿಯವರು ಆಯೋಜಿಸಿದ್ದ ’ರೈಸಿಂಗ್ ಕರ್ನಾಟಕ ೨೦೧೭’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಪಕ್ಷದ ನಿಲುವುಗಳ ಕುರಿತು ಸಂವಾದ ನಡೆಸಿದೆ.
Comments