ಲೋಕಸಭೆಗೆ ಪ್ರಜ್ವಲ್ ಜೆಡಿಎಸ್ ಅಭ್ಯರ್ಥಿ?

ಹುಣಸೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದ ಪ್ರಜ್ವಲ್ ರೇವಣ್ಣಗೆ ಅಸೆಂಬ್ಲಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಪ್ರಜ್ವಲ್ ರನ್ನು ಹಾಸನದಿಂದ ಲೋಕಸಭೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ. ಆದರೆ ಲೋಕಸಭೆಯ ಬದಲು ವಿಧಾನಸಭೆಯತ್ತಲೇ ಪ್ರಜ್ವಲ್ ಹೆಚ್ಚು ಆಸಕ್ತರಾಗಿದ್ದರೆ, ಗೌಡರು ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಪ್ರವೇಶ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದ ಪ್ರಜ್ವಲ್ ರೇವಣ್ಣಗೆ ಎಂಎಲ್‌ಎ ಟಿಕೆಟ್ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆಯ ಬದಲು 2019ರ ಲೋಕಸಭಾ ಚುನಾವಣೆಯ ಟಿಕೆಟ್ ನೀಡಲು ದೇವೇಗೌಡರ ನಿರ್ಧಾರ ಮಾಡಿದ್ದು, 2019ರ ಹಾಸನದಿಂದ ಪ್ರಜ್ವಲ್ ಅವರನ್ನು ಕಣಕ್ಕಿಳಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Comments