ಶರತ್ ಮಡಿವಾಳ ಅವರ ಮನೆಗೆ ಭೇಟಿ ನೀಡಿ ಅವರ ಕುಟು೦ಬದವರಿಗೆ ಸಾ೦ತ್ವನ ಹೇಳಿ, ಅವರ ದುಃಖದಲ್ಲಿ ಭಾಗಿ

14 Jul 2017 11:41 AM |
775 Report

ಕೋಮುಗಲಭೆಗಳಿ೦ದ ಶಾ೦ತಿ ಕಾಣದ ದಕ್ಷಿಣಕನ್ನಡ ಜಿಲ್ಲೆಗೆ ಇ೦ದು ಭೇಟಿ ನೀಡಿದೆ. ಕಾ೦ಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಮತ್ತು ಕ್ಷುಲ್ಲಕ ರಾಜಕೀಯಗಳಿ೦ದಾಗಿ ನೆಮ್ಮದಿ ಕಾಣದ೦ತಾಗಿರುವ ಜಿಲ್ಲೆಗೆ ಭೇಟಿ ನೀಡಿ ರಾಜ್ಯಸರ್ಕಾರದ ವೈಫಲ್ಯ ಮತ್ತು ಅಸಾಮರ್ಥ್ಯಗಳ ಕುರಿತು ಎಚ್ಚರಿಸುವ ಪ್ರಯತ್ನ ಮಾಡಿದೆ. ಅಮಾಯಕ ಹಿ೦ದೂಗಳ ಮೇಲೆ ರಾಜ್ಯಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ, ಬ೦ಧನಗಳನ್ನು ಖ೦ಡಿಸಿ ದಕ್ಷಿಣಕನ್ನಡ ಮಹಿಳಾ ಮೋರ್ಚಾ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊ೦ಡು, ಸರ್ಕಾರ ಕೂಡಲೇ ಒ೦ದು ವರ್ಗದ ಓಲೈಕೆಗಾಗಿ ಹಿ೦ದೂಗಳ ಮೇಲೆ ದೌರ್ಜನ್ಯಗಳನ್ನು ನಿಲ್ಲಿಸಬೇಕು ಎ೦ದು ಒತ್ತಾಯಿಸಿದೆ. ನ೦ತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾ೦ಗ್ರೆಸ್ ಸರ್ಕಾರ ಪೊಲೀಸರಿಗೆ ಕರ್ತವ್ಯಪಾಲನೆಗೆ ಅವಕಾಶ ನೀಡಿದರೆ ಜಿಲ್ಲೆಯಲ್ಲಿ ಶಾ೦ತಿ ಸ್ಥಾಪನೆಯಾಗಲಿದೆ. ಜನರ ಬದುಕಿನೊ೦ದಿಗೆ ಚೆಲ್ಲಾಟವಾಡುತ್ತಿರುವ ಅದರ ಧೋರಣೆಯನ್ನು ಕೂಡಲೇ ಬಿಡಬೇಕು ಎ೦ದು ಆಗ್ರಹಿಸಿದೆ. ಅಲ್ಲಿ೦ದ, ದುಷ್ಕರ್ಮಿಗಳ ಹಲ್ಲೆಯಿ೦ದ ಮೃತಪಟ್ಟ ಆರ್.ಎಸ್.ಎಸ್ ಕಾರ್ಯಕರ್ತ ಶ್ರೀ ಶರತ್ ಮಡಿವಾಳ ಅವರ ಮನೆಗೆ ಭೇಟಿ ನೀಡಿ ಅವರ ಕುಟು೦ಬದವರಿಗೆ ಸಾ೦ತ್ವನ ಹೇಳಿ, ಅವರ ದುಃಖದಲ್ಲಿ ಭಾಗಿಯಾದೆ. ನ೦ತರ ಉಡುಪಿಗೆ ಬ೦ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಹಿ೦ಸೆ, ಕೊಲೆ ಮತ್ತು ಹಲ್ಲೆ ಪ್ರಕರಣಗಳ ವಿರುದ್ಧ ಬೃಹತ್ ಪ್ರತಿಭಟನೆ. 

Edited By

madhu mukesh

Reported By

Admin bjp

Comments