ಕೆಪಿಸಿಸಿ ಪುನರ್ ರಚನೆಗೆ ರಾಹುಲ್ ಅನುಮೋದನೆ
ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸದಾಗಿ ಸಿದ್ದಪಡಿಸಿರುವ ಪದಾಧಿಕಾರಿಗಳ ಪಟ್ಟಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ. 17 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿಗಳು. 96 ಕಾರ್ಯದರ್ಶಿಗಳನ್ನು ನೇಮಿಸುವ ಜೊತೆಗೆ ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ.
ಹಿರಿಯ ಮುಖಂಡರುಗಳಾದ ಬಿ.ಎಸ್ ಶಂಕರ್, ರಾಣಿ ಸತೀಶ್, ಬಿ.ಕೆ ಚಂದ್ರಶೇಖರ್ ಕೆಪಿಸಿಸಿಯ ಉಪಾಧ್ಯಕ್ಷರುಗಳ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಹಿಂದಿಗಿಂತ ಈ ಬಾರಿಯ ಪಟ್ಟಿ ದೊಡ್ಡದಾಗಿದ್ದು ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಎನ್.ವೈ. ಹನುಮಂತಪ್ಪ, ಬಿ.ಶಿವರಾಮ್, ಎಚ್.ಟಿ. ಸಾಂಗ್ಲಿಯಾನ, ರಾಣಿ ಸತೀಶ್, ಎ.ಎಂ. ಹಿಂಡಸಗೇರಿ, ವೀರಕುಮಾರ ಪಾಟೀಲ್, ಡಿ.ಆರ್. ಪಾಟೀಲ್, ಎಲ್.ಹನುಮಂತಯ್ಯ, ಪ್ರೊ.ರಾಧಾಕೃಷ್ಣ, ಎನ್.ಎಸ್. ಬೋಸರಾಜ್, ಆರ್.ಕೃಷ್ಣಪ್ಪ, ಮಿಟ್ಟು ಚೆಂಗಪ್ಪ ಮತ್ತು ಕೆ.ಸಿ. ಕೊಂಡಯ್ಯ ಅವರನ್ನು ಉಪಾಧ್ಯಕ್ಷರುಗಳನ್ನಾಗಿ ನೇಮಕ ಮಾಡಲಾಗಿದೆ.
ವಿಧಾನಸಭೆ ಚುನಾವಣೆಯ ಗಮನದಲ್ಲಿರಿಸಿಕೊಂಡು ರಾಜ್ಯದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ನೀಡಿರುವ ಕಾಂಗ್ರೆಸ್ ಹೈಕಮಾಂಡ್, ಜಾತಿವಾರು ಲೆಕ್ಕಾಚಾರ ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಿದೆ.
Comments