ರಾಜಕೀಯ ಮುಖಂಡರಿಗೆ ಎಚ್.ಡಿ.ದೇವೇಗೌಡ ಕಿವಿಮಾತು
ಹಾಸನ: ಕರಾವಳಿ ಕಲಹದಿಂದ ತೀವ್ರ ಬೇಸರವಾಗಿದ್ದು, ಇದು ರಾಜಕೀಯ ಗೊಂದಲವೋ ,ಆಡಳಿತ ವೈಫಲ್ಯವೊ ಎನ್ನುವುದು ತಿಳಿಯುತ್ತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿಯಲ್ಲಿ ನಡೆದ ಹಿಂಸಾಚಾರ ತೀವ್ರ ನೋವು ತಂದಿದೆ. ಈ ವಿಚಾರದಲ್ಲಿ ರಾಜಕೀಯ ಮುಖಂಡರು ಅಸಭ್ಯ ವರ್ತನೆ ತೋರುವುದು ಸರಿಯಲ್ಲ. ಬಿಜೆಪಿ,ಕಾಂಗ್ರೆಸ್ ಪಕ್ಷಗಳೆರಡೂ ಉನ್ನತಮಟ್ಟದ ವ್ಯವಸ್ಥೆ ಹೊಂದಿದ್ದು, ಅಶ್ಲೀಲ ಪದಗಳಲ್ಲಿ ಕೆಸರೆರಚಾಟ ನಡೆಸುವುದು ನಾಗರಿಕ ಸಮಾಜದಲ್ಲಿ ಗೌರವ ತರುವಂಥಹದ್ದಲ್ಲ ಎಂದರು.
ದಕಿಣ ಕನ್ನಡದ ಬಂಟ್ವಾಳದಲ್ಲಿ ಜುಲೈ15 ರಂದು ಸಾಮರಸ್ಯಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ. ಪಕ್ಷದ ಚಿಹ್ನೆ ಹೊರತು ಪಡಿಸಿ ನಡೆಸುತ್ತಿದ್ದು ಶಾಂತಿ ಸಭೆ ಅಲ್ಲ. ಯಾವುದೇ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿಲ್ಲ ಎಂದರು.
Comments