ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಆಡಳಿತವನ್ನು ಮೆಚ್ಚಿರುವ ಜನತೆ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಬಹಿರಂಗವಾಗುವ ಮುಂಚೆ ಸ್ವಲ್ಪ ಮಟ್ಟಿಗಾದರೂ ಕೋಮುವಾದಿ ಮನಸ್ಥಿತಿಯುಳ್ಳವರ ಮತಗಳನ್ನು ಕ್ರೂಢಿಕರಣ ಮಾಡುವ ದುರುದ್ದೇಶದ ಭಾಗವೇ ಕರಾವಳಿ ಭಾಗದಲ್ಲಿ ಕೋಮು ದ್ವೇಷವನ್ನು ಹುಟ್ಟು ಹಾಕುವ ಚಿಲ್ಲರೆ ರಾಜಕೀಯ ಮಾಡುವದರಲ್ಲಿ ಯಡಿಯೂರಪ್ಪ ಮತ್ತವರ ಕೊಳಕು ಪಟಾಲಂ ನಿರಂತರವಾಗಿ ಯತ್ನಿಸುತ್ತಿದ್ದಾರೆ.
ಗುಪ್ತ ಸಮೀಕ್ಷೆಯ ಅಂದಾಜಿನ ಪ್ರಕಾರ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ "ದಲಿತ , ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ" ಸಮುದಾಯದ ಒಟ್ಟಾರೆ ಮತದಾರರ ಪೈಕಿ 73.16% ಮತದಾರರು ಮತ್ತು ಲಿಂಗಾಯತ ಹಾಗೂ ಒಕ್ಕಲಿಗರು ಸೇರಿದಂತೆ ಇತರ ಮೇಲ್ವರ್ಗದ ಸಮುದಾಯದ ಒಟ್ಟು ಮತದಾರರ ಪೈಕಿ 31.74% ಮತದಾರರು ಮುಂಬರುವ 2018 ರ ವಿಧಾನಸಭೆಯ ಮಹಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಿಲ್ಲುತ್ತಾರೆಂಬ ಸ್ಪೋಟಕ ಮಾಹಿತಿ ಅರಿತ ಕೋಮುವಾದಿಗಳ ಎದೆಯಲ್ಲಿ 11 ಕಿಲೋ ವೋಲ್ಟ್ ನಷ್ಟು ಕಂಪನ ಶುರುವಾಗಿರುವ ಕಾರಣ ಮಿಷನ್ - 150 ಯನ್ನು ಮಣ್ಣಿನಲ್ಲಿ ಹೂತು ಹಾಕಿ ಕೋಮು ದ್ವೇಷದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕುತಂತ್ರದಲ್ಲಿ ನಿರತರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಆಡಳಿತವನ್ನು ಮೆಚ್ಚಿರುವ ಜನತೆ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯನ್ನು ಅರಿತ ಅಮಿತ್ ಶಾ ಗುಪ್ತವಾಗಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಭೆ ಮಾಡಿ ಏನಾದರೂ ಮಾಡಿ ಜನರ ಗಮನ ಬೇರೆಡೆಗೆ ಸೆಳೆಯಲು ಕೋಮು ದ್ವೇಷದ ಜ್ವಾಲೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿರುವದರ ಫಲವೇ 'ಶರತ್ ಮಡಿವಾಳ'ನ ಹೆಣ ಬಿದ್ದಿರುವದು ಎಂಬ ಸತ್ಯ ಕರಾವಳಿ ಭಾಗದ ಅಮಾಯಕ ಜನರು ಅರ್ಥಮಾಡಿಕೊಳ್ಳಬೇಕಾಗಿದೆ.
Comments