ಮಧ್ಯಪ್ರದೇಶದಲ್ಲಿ ಉಳುಮೆ ಮಾಡಿದ ಹೆಣ್ಮಕ್ಕಳಿಗೆ ಡಿ.ಕೆ.ಶಿ ಸಹಾಯ ಹಸ್ತ
ಡಿ.ಕೆ. ಶಿವಕುಮಾರ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ 50,000 ರೂ. ಡಿ.ಡಿ. ಕಳುಹಿಸಿದ್ದಾರೆ.
ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಬಡ ರೈತರೊಬ್ಬರು ಉಳುಮೆಗೆ ಎತ್ತುಗಳಿಲ್ಲದೇ ಹೆಣ್ಣುಮಕ್ಕಳನ್ನೇ ಬೇಸಾಯ ಎಳೆಯಲು ಬಳಸಿಕೊಂಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.
ಈ ರೈತನ ಕುಟುಂಬಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೆರವಿನ ಹಸ್ತ ಚಾಚಿದ್ದಾರೆ. ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ 50,000 ರೂ. ಡಿ.ಡಿ. ಕಳುಹಿಸಿದ್ದಾರೆ.
ಸೆಹೋರ್ ಜಿಲ್ಲೆ ಬಸಂತ್ ಪುರ ಪಾಂಗ್ರಿಯ ರೈತ ಸರ್ದಾರ್ ಬರೇಲಾ ತನ್ನ ಮಕ್ಕಳಾದ ರಾಧಿಕಾ ಹಾಗೂ ಕುಂತಿ ಅವರನ್ನು ಉಳುಮೆಯಲ್ಲಿ ತೊಡಗಿಸಿಕೊಂಡಿದ್ದರು.ಇದನ್ನು ಗಮನಿಸಿದ ಶಿವಕುಮಾರ್, ಡಿ.ಡಿ. ಮೂಲಕ 50,000 ರೂ. ಕಳುಹಿಸಿಕೊಟ್ಟಿದ್ದು, ಹೆಣ್ಣುಮಕ್ಕಳ ಜೀವನ, ಶಿಕ್ಷಣಕ್ಕೆ ಬಳಸುವಂತೆ ತಿಳಿಸಿದ್ದಾರೆ.
Comments