ಸಿಎಂ ಸಿದ್ದರಾಮಯ್ಯ ಬಿಜೆಪಿಯ ವಿರುದ್ಧ ಕಿಡಿ ಕಾರಿದ್ದಾರೆ.

11 Jul 2017 4:32 PM |
490 Report

ಬೆಂಗಳೂರು : ಬಿಜೆಪಿ ಮೊದಲು ತಮ್ಮ ಸಂಘಟನೆಗಳಿಗೆ ಸುಮ್ಮುನಿರಲು ಹೇಳಲಿ. ದಕ್ಷಿಣ ಕನ್ನಡದಲ್ಲಿನ ಗಲಭೆ ತಾನಾಗಿಯೇ ಹತೋಟಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಗಲಭೆಗೆ ಸಚಿವರಾದ ಖಾದರ್ ಮತ್ತು ರಮನಾಥ್ ರೈ ಅವರು ಕಾರಣ ಎಂಬ ಬಿಜೆಪಿ ಆರೋಪದ ಕುರಿತು ಕೆಂಡಾಮಂಡಲವಾಗಿ ಬಿಜೆಪಿಯದ್ದು ತೋಳ ಮತ್ತು ಕುರಿಮರಿ ಕಥೆ. ಬಿಜೆಪಿ ಬೆಂಕಿಗೆ ತುಪ್ಪ ಸುರಿಯುತ್ತಿದೆ ಎಂದರು.

ಶೋಭಾ ಕರಂದ್ಲಾಜೆ ಅವರು ದಕ್ಷಿಣಕನ್ನಡವರು ಷಂಡರೇ ಎಂದಿದ್ದರು ಕುರಿತು ನಾನು ಇಂತಹ ಭಾಷೆ ಬಳಸುವುದಿಲ್ಲ. ಆ ಬಗ್ಗೆ ಅವರೇ ಉತ್ತರ ನೀಡಬೇಕು ಎಂದರು.

ಶರತ್ ಹತ್ಯೆ ಪ್ರಕರಣ ಎನ್‌ಐಎಗೆ ವಹಿಸುವ ಯಾವುದೇ ಅವಶ್ಯಕತೆ ಇಲ್ಲ.ನಮ್ಮ ಪೊಲೀಸರೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ . ಯಾವುದೇ ಆಗಲಿ, ಗಲಭೆಗೆ ಕಾರಣವಾಗುವ ಕೋಮುವಾದಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

Edited By

congress admin

Reported By

congress admin

Comments