ತುರುವೇಕೆರೆಯಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯ್ ಜನ್ಮಶತಾಬ್ದಿಯ ಅಂಗವಾಗಿ ವಿಸ್ತಾರಕ ಕಾರ್ಯಕ್ರಮ
ಇಂದು ತುರುವೇಕೆರೆಯಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯ್ ಜನ್ಮಶತಾಬ್ದಿಯ ಅಂಗವಾಗಿ ವಿಸ್ತಾರಕ ಕಾರ್ಯಕ್ರಮವನ್ನು ನಡೆಸಿದೆ. ಮೊದಲಿಗೆ ಕಾರಂಜಿ ಹಳ್ಳಿಯ ಮನೆಮನೆಗಳಿಗೆ ತೆರಳಿ ಮೋದಿ ಸರ್ಕಾರದ ಬಡವರಿಗಾಗಿಯೇ ಇರುವ ಅನೇಕ ಯೋಜನೆಗಳ ಮಾಹಿತಿ ನೀಡಿ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಾಕೀತು ಮಾಡಿದೆ. ನಂತರ ಸರ್ಕಾರಿ ಶಾಲೆಯ ಆವರಣದಲ್ಲಿ ಸಸಿ ನೆಟ್ಟು ತುರುವೇಕೆರೆಯ ವಿರಕ್ತ ಮಠದ ಶ್ರೀಗಳವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದೆ. ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಹಿರಿಯ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದೆ. ಬಿಜೆಪಿಯ ಜನಸಂಪರ್ಕ ಅಭಿಯಾನದ ಯಶಸ್ಸಿನ ಬೆನ್ನಲ್ಲೇ ವಿಸ್ತಾರಕ ಯೋಜನೆಯನ್ನು ನಡೆಸುತ್ತಿದ್ದು ಜನರು ಉತ್ತಮವಾಗಿ ಬೆಂಬಲಿಸುತ್ತಿದ್ದಾರೆ.
Comments