ಸೂಟ್ ಕೇಸ್ ಸಂಸ್ಕೃತಿ ಬಗ್ಗೆ ಎಚ್ ಡಿಕೆ ಕಡಕ್ ಉತ್ತರ!

ಸೂಟ್ ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ, ಪ್ರಜ್ವಲ್ ಕ್ಷಮೆ ಕೇಳುವ ಅವಶ್ಯಕತೆಯಿಲ್ಲ: ಎಚ್ಡಿಕೆ ಬೆಂಗಳೂರು: ಜೆಡಿಎಸ್ನಲ್ಲಿ ಸೂಟ್ಕೇಸ್ ಸಂಸ್ಕೃತಿ ಇದೆ ಎಂದು ಪ್ರಜ್ವಲ್ ರೇವಣ್ಣ ನೀಡಿದ್ದ ಹೇಳಿಕೆಯನ್ನು ಭಿನ್ನಮತೀಯರ ಕಡೆಗೆ ತಿರುಗಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ಕ್ಷಮೆ ಕೋರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು.ಈ ಹಿಂದೆ ಜೆಡಿಎಸ್ನಲ್ಲಿ ಸೂಟ್ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಸೂಟ್ಕೇಸ್ ಪಡೆಯುತ್ತಿದ್ದವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದೂ ಹೌದು. ಆದರೆ, ಅವರೆಲ್ಲ ಈಗಾಗಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಹುಶಃ ಅವರನ್ನು ಕುರಿತು ಪ್ರಜ್ವಲ್ ಹೇಳಿರಬಹುದು ಎಂದು ಹೇಳಿದರು.
ಪ್ರಜ್ವಲ್ ತಮ್ಮನ್ನು ಕುರಿತಾಗಿ ಆ ಹೇಳಿಕೆ ಕೊಟ್ಟಿಲ್ಲ, ತಮ್ಮ ಹೆಸರನ್ನೂ ಪ್ರಸ್ತಾಪಿಸಿಲ್ಲ. ಹೀಗಾಗಿ, ಅದರ ಬಗ್ಗೆ ಚರ್ಚೆ ಅನವಶ್ಯಕ. ತಮ್ಮನ್ನು ಕ್ಷಮೆ ಕೇಳ್ಳೋಕೆ ಪ್ರಜ್ವಲ್ ಯಾವುದೇ ತಪ್ಪು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಆಕ್ರೋಶಗೊಂಡಿರುವ ಶಾಸಕ ಜಮೀರ್ ಅಹಮದ್, ಕುಮಾರಸ್ವಾಮಿ ಹಿಟ್ ಅಂಡ್ ರನ್ ರಾಜಕಾರಣಿ. ನಮ್ಮನ್ನು ಕೆಣಕಿದರೆ ಸುಮ್ಮರುವುದಿಲ್ಲ. ಎಲ್ಲ ಬಿಚ್ಚಿಡಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
Comments