ಕರ್ತವ್ಯ ನಿರತ ಲೈನ್ಮನ್ ಸತ್ತರೆ 5ಲಕ್ಷ ರೂಪಾಯಿ ಪರಿಹಾರ

06 Jul 2017 1:00 PM |
699 Report

ಪ್ರೊಬೇಷನರಿ ಲೈನ್‌ಮನ್‌ಗಳು ಒಂದು ವೇಳೆ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ಕಾಯಂ ನೌಕರರಿಗೆ ಸಿಗುವ ಸವಲತ್ತುಗಳೇ ಅವರಿಗೂ ಸಿಗಲಿವೆ.

ಬೆಂಗಳೂರು: ಕರ್ತವ್ಯದಲ್ಲಿದ್ದಾಗ ಲೈನ್‌ಮನ್‌ಗಳು ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ  5ಲಕ್ಷ ರೂಪಾಯಿ  ಪರಿಹಾರ ಕೊಡುವುದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದರು.

ವಿದ್ಯುತ್‌ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈಗ  2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇತ್ತು ಎಂದು ಶಿವಕುಮಾರ್‌ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಪ್ರೊಬೇಷನರಿ ಲೈನ್‌ಮನ್‌ಗಳು ವಿದ್ಯುತ್‌ ಕಂಬ ಹತ್ತಬಾರದು ಎಂಬ ನಿಯಮವಿತ್ತು. ಅದನ್ನು ವಾಪಸ್‌ ಪಡೆದು ಅವರೂ ಕಂಬ ಹತ್ತಲು ಆದೇಶಿಸಲಾಗಿದೆ. ಒಂದು ವೇಳೆ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ಕಾಯಂ ನೌಕರರಿಗೆ ಸಿಗುವ ಸವಲತ್ತುಗಳೇ ಅವರಿಗೂ ಸಿಗಲಿವೆ ಎಂದರು.

Edited By

dks fans

Reported By

dks fans

Comments